ಪುತ್ತೂರು: ಸವಣೂರು ಗ್ರಾಮ ದೈವ ಶಿರಾಡಿ, ರಕ್ತೇಶ್ವರಿ, ಮಹಿಷಂತ್ತಾಯ ದೈವಗಳ ದೈವಸ್ಥಾನ ಮಾಲೆತ್ತಾರು ಹಾಗೂ ಚೌಕಿಮಠ ಇದರ ಪ್ರತಿಷ್ಠಾ ವಾರ್ಷಿಕೋತ್ಸವ ಜರಗಿತು.
ಪೂರ್ವಾಹ್ನ ಮಾಲೆತ್ತಾರು ಶಿರಾಡಿ ದೈವಸ್ಥಾನದಲ್ಲಿ ಗಣಹೋಮ, ತಂಬಿಲ, ಸಂಜೆ ಚೌಕಿಮಠ ರಕ್ತೇಶ್ವರಿ ಮತ್ತು ಮಹಿಷಂತ್ತಾಯ ದೈವಸ್ಥಾನದಲ್ಲಿ ತಂಬಿಲ ಸೇವೆ ಜರಗಿತು. ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ನಾರಾಯಣ ಬಡೆಕಿಲ್ಲಾಯರವರು ಪೂಜಾ ವಿಧಿವಿಧಾನವನ್ನು ನೇರವೇರಿಸಿದರು. ಅರ್ಚಕ ಕಾರ್ತಿಕ್ ಬಡೆಕಿಲ್ಲಾಯ ಸಹಕರಿಸಿದರು.
ದೈವಸ್ಥಾನದ ಆಡಳಿತದಾರರಾದ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಸವಣೂರು ಗ್ರಾಮ ದೈವ ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷ ಪ್ರಮೋದ್ ಕೆ.ಆರ್ ಕೋಡಿಬೈಲು, ನಿಕಟ ಪೂರ್ವಾಧ್ಯಕ್ಷ ಪ್ರಜ್ವಲ್ ಕೆ.ಆರ್ ಕೋಡಿಬೈಲು, ಅಧ್ಯಕ್ಷ ಪುರಂದರ ಬಾರಿಕೆ, ಬಾಬು ಗೌಡ ಸುಣ್ಣಾಜೆ, ಬೆಳಿಯಪ್ಪ ಗೌಡ ಚೌಕಿಮಠ, ಸವಣೂರು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ನಿಕಟ ಪೂರ್ವಾಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು, ಅಧ್ಯಕ್ಷ ಶ್ರೀಧರ್ ಸುಣ್ಣಾಜೆ, ಪ್ರಧಾನ ಕಾರ್ಯದರ್ಶಿ ರಾಘವ ಗೌಡ ಸವಣೂರು, ಗಂಗಾಧರ್ ಸುಣ್ಣಾಜೆ, ದಯಾನಂದ ಮಾಲೆತ್ತಾರು, ವಿಠಲ ರೈ ನೆಕ್ಕರೆ, ರಾಮಚಂದ್ರ ಕನಡ ಬಾರಿಕೆ, ಪ್ರವೀಣ್ ಬಾರಿಕೆ, ಕಿಶೋರ್ ಮಾಲೆತ್ತಾರು, ರುಕ್ಮಯ್ಯ ಗೌಡ, ಅಕ್ಷತಾ ಮಾಲೆತ್ತಾರು, ಮೋಹಿನಿ ಚೌಕಿಮಠ, ಕೀರ್ತಿನ್ ಕೋಡಿಬೈಲು, ಚಂದ್ರಶೇಖರ್ ಗೌಡ ಅಂಬಟೆತಡಿ, ದಾಮೋದರ ಗೌಡ ಪಟ್ಟೆ, ರುಕ್ಕಯ್ಯ ಗೌಡ ಹೊಸವೊಕ್ಲು, ಜಯಶ್ರೀ ಭಾಸ್ಕರ್ ಗೌಡ ಅಡೀಲು, ನಂದ ಕುಮಾರ್ ಚೌಕಿಮಠ, ಕಾಂತಪ್ಪ ಪೂಜಾರಿ ಚೌಕಿಮಠ, ಗಿರಿಜಾ ಚೌಕಿಮಠ, ಹೇಮಲತಾ ಚೌಕಿಮಠ, ಕುಸುಮಾ ಚೌಕಿಮಠ, ನಾರಾಯಣ ಪೂಜಾರಿ ಮಾಲೆತ್ತಾರು, ಜೋಗಿ ಬೇರಿಕೆ, ಭಾಸ್ಕರ್ ಗೌಡ ಚೌಕಿಮಠ, ಧರ್ಮಪಾಲ ಗೌಡ ನೆಕ್ಕರೆ, ಗುಣಪಾಲ ಗೌಡ ನೆಕ್ಕರೆ, ಶಿವಪ್ಪ ನಾಯ್ಕ ಬಾರಿಕೆ, ಸಾಂತಪ್ಪ ಗೌಡ ಪಟ್ಟೆ, ರೇವತಿ ಚೌಕಿಮಠ, ಡೋಂಬಯ್ಯ ಪೂಜಾರಿ ಮಾಲೆತ್ತಾರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.