ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆಯ ಬಳಿಕ ದೇವರಮಾರು ಗದ್ದೆಯಲ್ಲಿ ಬಿದ್ದಿದ್ದ ಕಸ – ತ್ಯಾಜ್ಯವನ್ನು ಹೆಕ್ಕುವ ಮೂಲಕ ಶಾಸಕ ಸಂಜೀವ ಮಠಂದೂರು ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಜಯಂತ್ಯೋತ್ಸವ ಸಂಸ್ಮರಣೆ ಬಳಿಕ ದೇವರಮಾರು ಗದ್ದೆಯಲ್ಲಿ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿತ್ತು. ಇದನ್ನು ಗಮನಿಸಿದ ಸಂಸ್ಮರಣಾ ಸಮಿತಿ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು ಮತ್ತವರ ತಂಡ ತ್ಯಾಜ್ಯವನ್ನು ಹೆಕ್ಕಿದ್ದಾರೆ. ಬಳಿಕ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದಾರೆ. ಈ ಮೂಲಕ ದೇವಸ್ಥಾನದ ಆವರಣವನ್ನು ಶುಚಿಯಾಗಿಡುವ ಕೆಲಸ ಮಾಡಿದ್ದಾರೆ.
ಜಯಂತ್ಯೋತ್ಸವ ಸಂಸ್ಮರಣಾ ಸಮಿತಿಯ ಕಾರ್ಯಾಲಯದಿಂದ ಆರಂಭಗೊಂಡ ಶುಚಿತ್ವಕ್ಕೆ ಶಾಸಕ ಸಂಜೀವ ಮಠಂದೂರು ಅವರ ಜೊತೆ ಸಮಿತಿಯ ಪ್ರಮುಖರು ಜೊತೆಯಾದರು. ಸಮಿತಿ ಜಿಲ್ಲಾ ಸಂಚಾಲಕ ಚಿದಾನಂದ ಬೈಲಾಡಿ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ. ಗೌಡ, ಗೌರಿ ಬನ್ನೂರು, ಪ್ರಮುಖರಾದ ದಯಾನಂದ ಕೆ., ಶ್ರೀಧರ ಗೌಡ ಕಣಜಾಲು, ಶ್ರೀಧರ ಗೌಡ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಮೊದಲಾದವರು ಉಪಸ್ಥಿತರಿದ್ದರು.