ಪುತ್ತೂರು: ಮಾಣಿ ಪೆರಾಜೆ ಶ್ರೀ ರಾಮಚಂದ್ರಪುರ ಮಠದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಜ. 23ರಂದು ಧರ್ಮಸಭೆ ನಡೆಯಿತು.
ಪರಿವರ್ತನೆಯ ಸಾಕ್ಷಿ ರಾಘವೇಶ್ವರ ಶ್ರೀ: ಸಂಸದ ನಳಿನ್
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಗೋವಿನಿಂದ ಹಿಡಿದು ವಿಶ್ವವಿದ್ಯಾಲಯದವರೆಗೆ ಮಠದಿಂದ ಹಿಡಿದು ಅಯೋದ್ಯೆಯವರೆಗೆ ಪರಿವರ್ತನೆ ಮಾಡುವ ಒಂದು ಸಾಕ್ಷಿಎಂದರೆ ಗುರುಗಳಾದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಇಂತಹ ಒಂದು ಮಠ ಇರುವುದೇ ಹೆಮ್ಮೆಯ ಸಂಗತಿ ಎಂದರು.

ಬದುಕಿಗೆ ಪೂರಕ ಕಾರ್ಯಕ್ರಮ: ಶಾಸಕ ಸಂಜೀವ ಮಠಂದೂರು
ಶಾಸಕ ಸಂಜೀವ ಮಠಂದೂರು ಮಾತನಾಡಿ, ಧರ್ಮಧಾರಿತ ಬದುಕಿಗೆ ಪೂರಕವಾದ ಜೀವನ ರೂಪಿಸಲು ಇಂತಹ ಕಾರ್ಯಕ್ರಮದಿಂದ ಸಾಧ್ಯ . ಗುರುವರ್ಯರಿಂದ, ಋಷಿಗಳಿಂದ ಈ ದೇಶದಲ್ಲಿ ಭಾರತೀಯ ಪರಂಪರೆ ಉಳಿದಿದೆ. ಗುರುಗಳ ಆದರ್ಶ ಮಾರ್ಗದರ್ಶನದಿಂದ ಜಗತ್ತಿನಲ್ಲಿ ಭಾರತ ಆಧ್ಯಾತ್ಮ ದೇಶವಾಗಿ ಮುಂದೆ ಬರಲು ಸಾಧ್ಯವಾಗಿದೆ ಎಂದರು.


ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಕರ್ನಾಟಕ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ ಸಿಂಹ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮಪ್ಪ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಡಾ. ಪ್ರಭಾಕರ್ ಭಟ್ ಕಲಡ್ಕ, ರವೀಶ್ ತಂತ್ರಿ ಕುಂಟಾರು, ಬ್ರಾಹ್ಮಣ ಸಮಾಜದ ಅಧ್ಯಕ್ಷ ಕಟೀಲು ವೇದಮೂರ್ತಿ ವಾಸುದೇವ ಅಸ್ರಣ, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್ ಹೆಗಡೆ, ಪ್ರಸಾದ್ ಮುನಿಯಂಗಳ, ವೇದಮೂರ್ತಿ ವಾಶುದೇವ, ಡಿ.ಡಿ ಶರ್ಮ ಉಪಸ್ಥಿತರಿದ್ದರು.