ಕರಾವಳಿಗೆ ಪ್ರತ್ಯೇಕ ಪ್ರಣಾಳಿಯನ್ನೇ ಘೋಷಿಸಿದ ಕೈ ಪಕ್ಷ
ಮಂಗಳೂರು: ಕರಾವಳಿಯ ಬಿಜೆಪಿ ಭದ್ರಕೋಟೆಗೆ ನುಗ್ಗಬೇಕೆಂದು ಸಂಕಲ್ಪಸಿರುವ ಕಾಂಗ್ರೆಸ್ ಕರಾವಳಿ ಭಾಗಕ್ಕಾಗಿಯೇ ಪ್ರತ್ಯೇಕ ಪ್ರಣಾಳಿಕೆಯನ್ನು ಘೋಷಿಸಿದೆ. ಮಂಗಳೂರಿನಲ್ಲಿ ಭಾನುವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸಿರುವ ಕಾಂಗ್ರೆಸ್ ಪ್ರತ್ಯೇಕ ಪ್ರಣಾಲಿಕೆಯನ್ನು ಪ್ರಕಟಿಸಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಪ್ರತ್ಯೇಕ ಪ್ರಣಾಳಿಕೆಯ ಹತ್ತು ಅಂಶ ಘೋಷಿಸಿದ್ದಾರೆ.
ಪ್ರತ್ಯೇಕ ಪ್ರಣಾಳಿಕೆಯ ಹತ್ತು ಅಂಶ ಇಂತಿವೆ:
*ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಮೂಲಕ ತಾಯಂದಿರು ಮತ್ತು ಮಹಿಳೆಯರಿಗೆ ಉದ್ಯೋಗ
*ಮೀನುಗಾರರಿಗೆ 10 ಲಕ್ಷದ ಇನ್ಶೂರೆನ್ಸ್ ಹಾಗೂ ಮೀನುಗಾರರ ಮನೆಯ ಯಜಮಾನಿ ಮಹಿಳೆಗೆ ಬಡ್ಡಿ ರಹಿತ ಒಂದು ಲಕ್ಷ ರೂ ಸಾಲ
*ಬೋಟ್ ಖರೀದಿಗೆ ಶೇ.25 ಸಬ್ಸಿಡಿ
*ಮೀನುಗಾರಿಕಾ ಬೋಟ್‌ಗಳಿಗೆ ಹೆಚ್ಚುವರಿ ಡೀಸೆಲ್ ಪೂರೈಕೆ
*ಬಿಲ್ಲವ ಸಮಾಜ, ಈಡಿಗ ಸಮಾಜದವರಿಗೆ ಪುನರ್ವಸತಿ ಕಲ್ಪಿಸಲು ನಾರಾಯಣ ಅಭಿವೃದ್ಧಿ ನಿಗಮ ಸ್ಥಾಪನೆ
*ಈ ನಿಗಮಕ್ಕೆ ವರ್ಷಕ್ಕೆ 250 ಕೋಟಿ ಅನುದಾನ ಮೀಸಲು
*ಬಂಟ ಸಮುದಾಯದ ಅಭಿವೃದ್ಧಿಗೂ ವಾರ್ಷಿಕ 250 ಕೋಟಿ ಮೀಸಲು
*ಅಡಕೆ ಬೆಳೆ ಮತ್ತು ಅದರ ರೋಗದ ಪರಿಹಾರಕ್ಕೆ 50 ಕೋಟಿ ಮೀಸಲು
*ಕರಾವಳಿಯಲ್ಲಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಕೋಮು ಸಾಮಾಜಿಕ ಮತ್ತು ಸೌಹಾರ್ದತೆ ಸಮಿತಿ
*ಪ್ರತಿ ಪಂಚಾಯತ್‌ನಲ್ಲಿ ಈ ಸಮಿತಿಗೆ ಅನುದಾನ