19 ಕರ್ನಾಟಕ ಬೆಟಾಲಿಯನ್ ಎನ್ ಸಿ.ಸಿ. ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ಸಮಾರೋಪ| ಸಂತಫಿಲೋಮಿನಾ ಕಾಲೇಜಿನಲ್ಲಿ ಸಮಾರಂಭ

ಪುತ್ತೂರು: ಇಲ್ಲಿನ ಸಂತಫಿಲೋಮಿನಾ ಕಾಲೇಜು ಆವರಣದಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಸಂಯೋಜಿತ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂತ ಫಿಲೋಮಿನಾ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.

ಸಮಾರೋಪ ಭಾಷಣ ಮಾಡಿದ ಶಿಬಿರದ ಕಮಾಂಡೆಂಟ್ ಕರ್ನಲ್ ಜೆಫ್ರಿನ್ ಜೆ. ಅರಾನ್ಹಾ, ಸಂಯೋಜಿತ ವಾರ್ಷಿಕ ತರಬೇತಿ ಶಿಬಿರದಲ್ಲಿ ಕೆಡೆಟ್ ತುರ್ತುಪರಿಸ್ಥಿತಿಯನ್ನು ಎದುರಿಸುವಲ್ಲಿ ಸಹಕಾರಿಯಾಗುವ ರೀತಿಯ ಪ್ರಾಥಮಿಕ ತರಬೇತಿಯನ್ನು ನೀಡಲಾಗುತ್ತದೆ. ಈ ಶಿಬಿರವು ಕೇವಲ 7 ದಿನಗಳದ್ಧಾಗಿದ್ದ ರೂ 3 ಜಿಲ್ಲೆಗಳ ಕೆಡೆಟ್ ಗಳನ್ನುಒಗ್ಗೂಡಿಸುತ್ತದೆ. ಪ್ರತಿಯೊಬ್ಬನ ಜೀವನ ಶೈಲಿ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಬೇರೆಯಾಗಿದ್ದರೂ ಹಲವು ಸಹ ಶಿಬಿರಾರ್ಥಿಗಳ ಸ್ನೇಹ ಸಂಪಾದಿಸುವ ಅವಕಾಶಗಳು ಇರುವುದು ಇಂತಹ ಶಿಬಿರಗಳಲ್ಲಿ ಮಾತ್ರ. ಈ ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬನೂ ಶಿಸ್ತಿನ ಜೀವನ ನಡೆಸುವುದನ್ನು ಕಲಿಯುತ್ತಾನೆ. ಶಿಬಿರದಲ್ಲಿನ ಶಿಸ್ತು, ವಸ್ತ್ರಸಂಹಿತೆ, ಡ್ರಿಲ್  ತರಬೇತಿ, ವ್ಯಾಯಾಮ, ಅತ್ಯಾಧುನಿಕ ರೀತಿಯ ಶಸ್ತ್ರಾಸ್ತ್ರ ತರಬೇತಿ ಕೆಡೆಟ್ ಗಳ ಕೌಶಲ್ಯವನ್ನು ವೃದ್ಧಿಗೊಳಿಸಿವೆ. ಇಲ್ಲಿ ಕಲಿತ ಪಾಠದಿಂದ ಅವರು ಮುಂದೆ ಶಿಸ್ತಿನ ಜೀವನ ನಡೆಸುವಂತೆ ಹಾಗೂ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಸಂತ ಫಿಲೋಮಿನಾ ಕಾಲೇಜು ಪ್ರಾಂಶುಪಾಲ ವಂ| ಡಾ| ಆಂಟನಿಪ್ರಕಾಶ್ ಮೊಂತೆರೋ ಮಾತನಾಡಿ, ಶಿಬಿರದಲ್ಲಿ ಕೆಡೆಟ್ ಗಳು ಶಿಸ್ತಿನ ಜೀವನ ನಡೆಸುವುದನ್ನು ನೋಡಿ ಸಂತಸವಾಗುತ್ತಿದೆ. ಶಿಸ್ತು, ಏಕತೆ ಮುಂತಾದವು ನಮ್ಮ ಜೀವನಕ್ಕೆ ಅಗತ್ಯವಾದ ಹಲವಾರು ಮೌಲ್ಯಗಳನ್ನು ಕೆಡೆಟ್ ಗಳಿಗೆ ತಿಳಿಯಪಡಿಸುವುದರ ಮೂಲಕ ಅವರನ್ನು ಜವಾಬ್ದಾರಿ ಯುವನಾಗರಿಕರನ್ನಾಗಿ ಮಾಡುವಲ್ಲಿಇಂತಹ ಶಿಬಿರಗಳು ಸಹಕಾರಿಯಾಗಿವೆ. ಸಂಘಟಿತರಾಗಿ ಕಾರ್ಯನಿರ್ವಹಿಸುವುದು, ಕರ್ತವ್ಯಗಳನನ್ನು ಸಮರ್ಪಕವಾಗಿ ಅರ್ಹತೆಗನುಗುಣವಾಗಿ ನಿಭಾಯಿಸುವುದರ ಮೂಲಕ ವ್ಯಕ್ತಿತ್ವ ವಿಕಸನವಾಗಲು ಈ ಶಿಬಿರ ಸಹಕಾರಿಯಾಗಿದೆ ಎಂದು ಹೇಳಿದ ಅವರು, ಅಲ್ಲದೆ 19 ಕರ್ನಾಟಕ ಬೆಟಾಲಿಯನ್ ಎನ್ ಸಿ.ಸಿ.ಸಂಯೋಜಿತ ವಾರ್ಷಿಕ ತರಬೇತಿ ಶಿಬಿರವನ್ನು ನಡೆಸಲು ಪ್ರಶಾಂತವಾದ ಸಂತಫಿಲೋಮಿನಾ ಕಾಲೇಜನ್ನುಆಯ್ಕೆ ಮಾಡಿದುದಕ್ಕಾಗಿ ಅವರು ಸಂಘಟಕರನ್ನುಅಭಿನಂದಿಸಿದರು.































 
 

ಶಿಬಿರದ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ವಿಡಿಚಾಕೋ ಮಾತನಾಡಿ, ಈ ಶಿಬಿರವು ಅತ್ಯುತ್ತಮವಾಗಿ ನಡೆದಿದೆ. ಇದರಲ್ಲಿ ಪ್ರತಿಯೊಬ್ಬನಿಗೂ ಇಲ್ಲಿ ಕಳೆದ ದಿನಗಳು ಅವಿಸ್ಮರಣೀಯ ಎಂದು ಹೇಳಿದರು.

ಕ್ಯಾಪ್ಟನ್ ಬೀನಾ ಹಾಗೂ ಪ್ರಮೀಳಾ ಅವರು ಶಿಬಿರದಲ್ಲಿ ನಡೆಸಲಾದ ಸ್ಪರ್ಧೆಗಳ ಬಹುಮಾನ ವಿಜೇತರ ಹೆಸರನ್ನು ವಾಚಿಸಿದರು. 19 ಕರ್ನಾಟಕ ಬೆಟಾಲಿಯನ್ ಎನ್ ಸಿ.ಸಿ.ಸಂಯೋಜಿತ ವಾರ್ಷಿಕ ತರಬೇತಿ ಶಿಬಿರದ ಸ್ಮರಣ ಸಂಚಿಕೆಯನ್ನು ಈ ಸಂದರ್ಭ ಬಿಡುಗಡೆ ಮಾಡಲಾಯಿತು.

ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯ ಸೈನಿಕ ಶಾಲೆಯೂ ಸೇರಿ ಸುಮಾರು 450 ಮಂದಿ ಎನ್ ಸಿ ಸಿ ಕೆಡೆಟ್ ಗಳು ಹಾಗೂ 35 ಮಂದಿ ಎನ್ ಸಿ ಸಿ ಅಧಿಕಾರಿಗಳು ಭಾಗವಹಿಸಿದ್ದರು. ಈ ಶಿಬಿರದಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಹಾಗೂ ಭೂಸೇನಾದಳದ ತರಬೇತಿಯ ವಿವಿಧ ಹಂತಗಳ ಕುರಿತು ಅತ್ಯಾಧುನಿಕ ರೀತಿಯ ತರಬೇತಿ ನೀಡಲಾಯಿತು. ಇದಲ್ಲದೆ ಡ್ರಿಲ್, ಶಸ್ತ್ರಾಸ್ತ್ರ ತರಬೇತಿ, ಮ್ಯಾಪ್  ರೀಡಿಂಗ್, ಕಂಪಾಸ್ ಬಳಕೆ, ದೈಹಿಕ ಕಸರತ್ತು, ಯೋಗ ತರಬೇತಿ, ಫೈರಿಂಗ್ ನ ವಿವಿಧ ಹಂತಗಳು, ಎನ್ ಸಿ ಸಿ ಪರೀಕ್ಷೆಗಳಿಗೆ ತರಬೇತಿ ಸೈನ್ಯದ ವಿವಿದ ಪಠ್ಯ ವಿಷಯಗಳ ಬಗ್ಗೆಸಮಗ್ರ ಮಾಹಿತಿ ನೀಡಲಾಗಿದೆ ಹಾಗೂ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಸಂತ ಫಿಲೋಮಿನಾ ಕಾಲೇಜಿನ ಎನ್ ಸಿ ಸಿ ಅಧಿಕಾರಿ ಲೆಫ್ಟಿನೆಂಟ್ ಜಾನ್ಸನ್ ಡೇವಿಡ್ ಸಿಕ್ವೇರಾ ಹಾಗೂ ಸಂತಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಎನ್ ಸಿ ಸಿ ಅಧಿಕಾರಿ ಪೀಟರ್ ನರೇಶ್ ಲೋಬೋ ಶಿಬಿರದ ಉಸ್ತುವಾರಿ ನಿರ್ವಹಿಸಿದರು. ಭಾರತೀಯ ಭೂಸೇನೆಯ 25ಕ್ಕೂಅಧಿಕ ಅಧಿಕಾರಿಗಳು ವಿವಿಧ ವಿಷಯಗಳಲ್ಲಿ ಕೆಡೆಟ್ ಗಳಿಗೆ ತರಬೇತಿ ನೀಡಿಲಾಯಿತು.

ಅದಿತಿ ಜೋ಼ಷಿ ಸ್ವಾಗತಿಸಿ, ಓಂಕಾರ್  ವಂದಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top