ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ವಿಜಯ ಸಂಕಲ್ಪ ಅಭಿಯಾನ ಯಾತ್ರೆಯು ಜ. 22ರಂದು ಪುತ್ತೂರು ಗ್ರಾಮಾಂತರ ಮಂಡಲದ ಬಲ್ನಾಡ್ ಶಕ್ತಿ ಕೇಂದ್ರದ 107ನೇ ಬೂತ್ ನಲ್ಲಿ ನಡೆಯಿತು.
ಉನ್ನತ ಶಿಕ್ಷಣ, ವಿದ್ಯುನ್ಮಾನ, ಐಟಿ-ಬಿಟಿ ವಿಜ್ಞಾನ ಮತ್ತು ಜೀವನೋಪಯ ಸಚಿವ ಹಾಗೂ ಅಭಿಯಾನದ ರಾಜ್ಯ ಸಂಚಾಲಕ ಡಾ.ಸಿ. ಅಶ್ವಥ್ ನಾರಾಯಣ ಮಾತನಾಡಿ, ಕಾಂಗ್ರೇಸಿಗರ ಸುಳ್ಳು ಭರವಸೆಯನ್ನು ಭಾಜಪಾ ಕಾರ್ಯಕರ್ತರು ಮನೆ ಮನೆ ಭೇಟಿ ಸಂದರ್ಭದಲ್ಲಿ ಜನರಿಗೆ ತಿಳಿ ಹೇಳಲಿದ್ದಾರೆ. ಅಧಿಕಾರದಲ್ಲಿ ಇರುವಾಗ ಏನು ಮಾಡದವರು ಚುನಾವಣೆ ಸಂದರ್ಭ ಬಂದಾಗ ಜನತೆಗೆ ಸುಳ್ಳು ಭರವಸೆಯನ್ನು ನೀಡಿ ಜನರನ್ನು ಹಾದಿ ತಪ್ಪಿಸುತ್ತಾರೆ. ಆದ್ದರಿಂದ ಬಿಜೆಪಿ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕಿದೆ ಎಂದರು.
ಭಾ.ಜ.ಪಾ. ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, 50,000 ಮೇಲ್ಪಟ್ಟು ಭಾಜಪಾ ಸದಸ್ಯತ್ವ ನೋಂದಣಿ ಮಾಡುವ ಗುರಿ ಇಟ್ಟುಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ 107 ಬೂತ್ ನ ಮನೆಗಳನ್ನು ಸಂಪರ್ಕ ಮಾಡಿ ಸರಕಾರದ ಸಾಧನೆಯ ಕರಪತ್ರ ವಿತರಿಸಿ, 200 ಜನ ಮೇಲ್ಪಟ್ಟು ಭಾರತೀಯ ಜನತಾ ಪಕ್ಷದ ಸದಸ್ಯತ್ವ ಮಾಡಿ, ಗೋಡೆಯಲ್ಲಿ ಪಕ್ಷದ ಧ್ವಜದ ಬರಹಕ್ಕೆ ಚಾಲನೆ ನೀಡಲಾಯಿತು. ಭಾಜಪಾ ದಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಭಾಜಪಾ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಭಾಜಪಾ ಪುತ್ತೂರು ನಗರ ಮಂಡಲದ ಅಧ್ಯಕ್ಷ ಪಿಜಿ ಜಗನ್ನಿವಾಸ್ ರಾವ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಭಾಜಪಾ ಗ್ರಾಮಾಂತರ ಮತ್ತು ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಂಡಲದ ವಿಜಯ ಸಂಕಲ್ಪ ಅಭಿಯಾನದ ಸಂಚಾಲಕರಾದ ನಿತೀಶ್ ಕುಮಾರ್ ಶಾಂತಿವನ, ಜಯಶ್ರೀ ಎಸ್ ಶೆಟ್ಟಿ, ರಾಜ್ಯ ವಿಜಯ ಸಂಕಲ್ಪ ಅಭಿಯಾನ ಪ್ರಮುಖ್ ನಯನ ಗಣೇಶ್, ವಿಭಾಗ ಪ್ರಭಾರಿ ಹಾಗೂ ಮೈಸೂರು ವಿದ್ಯುತ್ ನಿಗಮ ಅಧ್ಯಕ್ಷರು ಉದಯ್ ಕುಮಾರ್ ಶೆಟ್ಟಿ, ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಸಮಿತಿ ಸದಸ್ಯರಾದ ಚಂದ್ರಶೇಖರ್ ರಾವ್ ಬಪ್ಪಳಿ, ರಾಮದಾಸ್ ಹಾರಡಿ, ಮಂಡಲ ವಿಜಯ ಸಂಕಲ್ಪ ಅಭಿಯಾನ ಸದಸ್ಯರಾದ ಹರೀಶ್ ಬಿಜತ್ರೆ, ಸುನಿಲ್ ದಡ್ದು, ಪ್ರವೀಣ್ ಸೇರಜೆ, ಭಾಜಪಾ ಗ್ರಾಮಾಂತರ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ನಗರಸಭಾ ಸದಸ್ಯೆ ಪೂರ್ಣಿಮ ಬಲ್ನಾಡ್, ಬಲ್ನಾಡು ಪಂಚಾಯತ್ ಅಧ್ಯಕ್ಷೆ ಇಂದಿರಾ ಎಸ್ ರೈ, ಬಲ್ನಾಡು ಪಂಚಾಯತ್ ಉಪಾಧ್ಯಕ್ಷೆ ಪರಮೇಶ್ವರಿ ಭಟ್, ಶಕ್ತಿ ಕೇಂದ್ರದ ಪ್ರಮುಖ್ ಅಕ್ಷಯ್ ಸಾರ್ಯ, 107 ಬೂತ್ ನ ಬೂತ್ ಅಧ್ಯಕ್ಷ ಭರತ್ ಚನಿಲ ಹಾಗೂ ಭಾಜಪಾ ಪುತ್ತೂರು ಗ್ರಾಮಾಂತರ ಹಾಗೂ ನಗರ ಮಂಡಲದ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಶಕ್ತಿ ಕೇಂದ್ರ ಪ್ರಮುಖರು, ಮಂಡಲದ ಹಿರಿಯ ಮತ್ತು ಕಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.