ಬಿಜೆಪಿಯಲ್ಲಿ ಹೆಚ್ಚಿದ ತಳಮಳ; ಕರಾವಳಿಯಲ್ಲಿ ಕೇಸರಿ ಪ್ರಾಬಲ್ಯ ಅಬಾಧಿತ
ಬೆಂಗಳೂರು : ವಿಧಾನಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿರುವಂತಯೇ ಪಕ್ಷಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ, ಪಾದಯಾತ್ರೆ, ರಥ ಯಾತ್ರೆ, ಬಸ್ ಯಾತ್ರೆ, ಮನೆಮನೆಗೆ ಭೇಟಿ, ಬೂತ್ ಮಟ್ಟದಲ್ಲಿ ಸಭೆ, ಘಟಾನುಘಟಿ ನಾಯಕ ಭೇಟಿ ಮಯಂತಾದ ಚಟುವಟಿಕಗಳು ಬಿರುವಿಸಿನಿಂದ ನಡೆಸುತ್ತಿವೆ. ಈ ನಡುವೆ ಖಾಸಗಿ ಸಂಸ್ತೆಯೊಂ<ದು ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯೊಂದು ಕೆಲವೊಂದು ಅಚ್ಚರಿಯ ಅಂಶಗಳನ್ನು ಒಳಗೊಂಡಿದೆ.
ಸಮೀಕ್ಷೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸರಳ ಬಹುಮತದ ಸನಿಹದಲ್ಲಿರುತ್ತದೆ ಎಂದು ಭವಿಷ್ಯ ನುಡಿದಿದೆ. ಈ ಸಮೀಕ್ಷೆ ಬಿಜೆಪಿಯ ತಳಮಳವನ್ನು ಹೆಚ್ಚಿಸದೆ. ಸಮೀಕ್ಷೆ ಪ್ರಕಾರ ಕಾಂಗ್ರೆಸ್ 108 ರಿಂದ 114 ಸೀಟುಗಳನ್ನು ಗಳಿಸಬಹುದು. ಬಿಜೆಪಿ 65 ರಿಂದ 75 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಜೆಡಿಎಸ್ 24-34 ಸ್ಥಾನಗಳನ್ನು ಗೆಲ್ಲಲಿದೆ. ಆಮ್ ಆದ್ಮಿ ಪಕ್ಷ ಗಳಿಕೆ ಶೂನ್ಯ.
ನವೆಂಬರ್ 20 ರಿಂದ ಜನವರಿ 15ರ ವರೆಗೆ ಕರ್ನಾಟಕದಲ್ಲಿ ಐಪಿಎಸ್‌ಎಸ್ ತಂಡದ ಸಹಯೋಗದೊಂದಿಗೆ ಹೈದರಾಬಾದ್‌ನ ಎಸ್‌ಎಎಸ್ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. ಕಾಂಗ್ರೆಸ್ ಮತ ಗಳಿಕೆ ಶೇ.38.14 ರಿಂದ ಶೇ.40 ಕ್ಕೆ (+1.86%) ಹೆಚ್ಚಳವಾಗಲಿದೆ. ಬಿಜೆಪಿ ಮತಗಳಿಕೆ ಶೇ. 36.35ರಿಂದ ಶೇ. 34 (- 2.35%) ಕುಸಿಯಲಿದೆ. ಜೆಡಿಎಸ್ ಕೂಡ ಶೇ.1.3 ಇಳಿಕೆಯೊಂದಿಗೆ ಶೇ.17 ಮತಗಳಿಸಬಹುದು ಎಂದು ಅದು ಸಮೀಕ್ಷೆ ಅಂದಾಜಿಸಿದೆ. ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಇತರರು ಶೇಕಡಾ 6 ರಷ್ಟು ಗಳಿಸಬಹುದು. ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಏಳು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಬೆಂಗಳೂರು ನಗರದಲ್ಲಿ 13ರಿಂದ 14 ಕಾಂಗ್ರೆಸ್ ಶಾಸಕರು ಆಯ್ಕೆಯಾಗಲಿದ್ದಾರೆ. ಬಿಜೆಪಿಯಿಂದ ಕೇವಲ 9ರಿಂದ 10 ಸದಸ್ಯರು ಆಯ್ಕೆಯಾಗಬಹುದು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಭಾರಿ ಕಸರತ್ತು ನಡೆಸುತ್ತಿದ್ದು, ಕೇವಲ 10ರಿಂದ 14 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್ 24 ರಿಂದ 25 ಸ್ಥಾನಗಳನ್ನು ಗಳಿಸಬಹುದು, ಜೆಡಿಎಸ್ 21 ರಿಂದ 22 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.
ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ 27 ರಿಂದ 28 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಬಹುದು. ಬಿಜೆಪಿ 14 ರಿಂದ 16 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ತನ್ನ ಭದ್ರಕೋಟೆಯಾಗಿರುವ ಕರಾವಳಿ ಕರ್ನಾಟಕದಲ್ಲಿ ಬಿಜೆಪಿ 12 ರಿಂದ 13 ಸ್ಥಾನಗಳಲ್ಲಿ ಗೆಲ್ಲಬಹುದು. ಆದರೆ ಕಾಂಗ್ರೆಸ್ ಏಳರಿಂದ ಎಂಟು ಸ್ಥಾನಗಳನ್ನು ಮಾತ್ರ ಪಡೆಯಬಹುದು.
ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ 12 ರಿಂದ 14 ಸ್ಥಾನಗಳನ್ನು ಪಡೆಯಬಹುದು. ಕಾಂಗ್ರೆಸ್ 21 ರಿಂದ 22 ಸ್ಥಾನಗಳನ್ನು ಗೆಲ್ಲಬಹುದು. ಕೊಪ್ಪಳ, ಗಂಗಾವತಿ, ಬಳ್ಳಾರಿ, ಕೋಲಾರ, ದಾವಣಗೆರೆ ಮತ್ತು ರಾಯಚೂರಿನಲ್ಲಿ ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು ನಿರ್ಣಾಯಕ ಅಂಶವಾಗಬಹುದು ಮತ್ತು ಹೊಸ ಪಕ್ಷವು ಕೆಲವು ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ. ಎಐಎಂಐಎಂ ಸ್ಪರ್ಧಿಸಿದರೆ ಕೇವಲ ಆರರಿಂದ ಏಳು ಸ್ಥಾನಗಳಲ್ಲಿ ಮತದಾನದ ಮಾದರಿಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.
ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ 16 ರಿಂದ 17 ಸ್ಥಾನಗಳನ್ನು ಪಡೆಯಲಿದ್ದು, ಬಿಜೆಪಿ ಕೇವಲ 8 ರಿಂದ 9 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಮತದಾರರಲ್ಲಿ ಕೋಪವಿದ್ದು, ಹಲವು ಸ್ಥಾನಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು ಎಂದು ಸಮೀಕ್ಷೆ ತೋರಿಸಿದೆ.
ಹಿಂದುಳಿದ, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ಕಾಂಗ್ರೆಸ್‌ಗೆ ಗರಿಷ್ಠ ಬೆಂಬಲ ಸಿಗಲಿದೆ ಎಂದು ಸಮೀಕ್ಷೆ ಹೇಳಿದೆ. ಒಕ್ಕಲಿಗರು ಶೇ.50 ರಷ್ಟು ಜೆಡಿಎಸ್, 38 ಪ್ರತಿಶತ ಕಾಂಗ್ರೆಸ್ ಮತ್ತು 10 ಪ್ರತಿಶತ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಹೇಳಿದೆ.