ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ರವಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಮೊದಲು ವೈಭವದ ಶೋಭಾಯಾತ್ರೆ ನಡೆಯಿತು. ದರ್ಬೆ ವೃತ್ತದಿಂದ ಹೊರಟ ಶೋಭಾಯಾತ್ರೆ ಪುತ್ತೂರು ಪೇಟೆ ಮೂಲಕ ಸಾಗಿ ಸಭಾಂಗಣದ ಬಳಿ ಸಮಾಪನಗೊಂಡಿತು. ಮುಂಭಾಗದಿಂದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪುತ್ಥಳಿ ಸಾಗಿದರೆ, ಅದನ್ನು ಅನುಸರಿಸಿ ಹಾಗೂ ಚೆಂಡೆ, ಕೊಂಬು ವಾದ್ಯಗಳ ಸ್ವರದೊಂದಿಗೆ ಸ್ವಾಮೀಜಿಗಳು, ಪ್ರಮುಖರು ಸಾಗಿದರು. ಇದರ ಹಿಂದೆ ಸಾಗಿ ಬಂದ ಟ್ಯಾಬ್ಲೋಗಳು ಆಕರ್ಷಕವಾಗಿತ್ತು. ಕೊನೆಯಲ್ಲಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪುತ್ಥಳಿಯನ್ನು ವೇದಿಕೆಯಲ್ಲಿ ಇಡಲಾಯಿತು.




