ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಜ. 22ರಂದು ನಡೆಯಲಿರುವ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಸಮಾರಂಭಕ್ಕೆ ಪೂರ್ವಭಾವಿಯಾಗಿ ಭವ್ಯ ಶೋಭಾಯಾತ್ರೆ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ದರ್ಬೆ ವೃತ್ತದಿಂದ ದೇವರಮಾರು ಗದ್ದೆಯವರೆಗೆ ನಡೆಯಲಿರುವ ಶೋಭಾಯಾತ್ರೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಜೊತೆಯಲ್ಲಿ ಮಹಾಸಂಸ್ಥಾನದ ಎಲ್ಲಾ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಮೆರವಣಿಗೆ ಆಕರ್ಷಕವಾಗಿ ಮೂಡಿಬರುವಂತಾಗಲು ವಿವಿಧ ಸ್ತಬ್ದಚಿತ್ರಗಳು ಮೆರುಗು ನೀಡಲಿವೆ.
ಸ್ತಬ್ಧಚಿತ್ರಗಳ್ಯಾವುವು:
ಮುಂಭಾಗದಿಂದ ಶೋಭಾಯಾತ್ರೆಯ ಮಾಹಿತಿಯನ್ನು ಸಾರುತ್ತಾ, ದಾರಿ ತೋರುತ್ತಾ ಧ್ವನಿವರ್ಧಕ ವಾಹನ ಸಾಗಲಿದೆ. ಇದನ್ನು ಅನುಸರಿಸಿ ಅಲಂಕೃತ ವಾಹನದಲ್ಲಿ ಭಾರತ ಮಾತೆ, ಚೆಂಡೆ, ಅಲಂಕೃತ ವಾಹನದಲ್ಲಿ ಭಗವಧ್ವಜ, ಆಕರ್ಷಕ ಕೊಡೆಗಳು, ಚಾರ್ವಾಕದ ಭಜನಾ ತಂಡ, ಸ್ವಾಮೀಜಿಗಳ ಪ್ರತಿಮೆ ಇರುವ ರಥ, ನಾದಸ್ವರ, ಸ್ವಾಮೀಜಿಗಳು ಇರುವ ರಥ, ಗೊಂಬೆಗಳು, ಬ್ಯಾಡ್ ಸೆಟ್, ಸ್ವಸಹಾಯ ಗುಂಪು, ಬಂಟ್ವಾಳ ಗೌಡ ಸಂಘದ ಸ್ತಬ್ಧ ಚಿತ್ರ, ಕಂಸಾಳೆ ನೃತ್ಯ, ಸ್ವಸಹಾಯ ಗುಂಪು, ಸುಳ್ಯ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸ್ತಬ್ಧ ಚಿತ್ರಣ, ವೀರಗಾಸೆ, ಸ್ವಸಹಾಯ ಗುಂಪು, ಸುಳ್ಯ ಯುವ ಗೌಡ ಸಂಘದ ಸ್ತಬ್ಧ ಚಿತ್ರ, ಕೊಡಗು ನೃತ್ಯ, ಸ್ವಸಹಾಯ ಗುಂಪು, ಬೆಳ್ತಂಗಡಿ ಗೌಡ ಸಂಘದ ಸ್ತಬ್ಧ ಚಿತ್ರ, ಡೊಳ್ಳು ಕುಣಿತ, ಸ್ವಸಹಾಯ ಗುಂಪು, ಮಂಗಳೂರು ಗೌಡ ಸಂಘದ ಸ್ತಬ್ಧ ಚಿತ್ರ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ, ಸ್ವಸಹಾಯ ಗುಂಪು, ಕಡಬ ಗೌಡ ಸಂಘದ ಸ್ತಬ್ಧ ಚಿತ್ರ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ, ಸ್ವಸಹಾಯ ಗುಂಪು, ಮಂಗಳೂರು ಒಕ್ಕಲಿಗರ ಗೌಡ ಸಂಘದಿಂದ ಸ್ತಬ್ಧ ಚಿತ್ರ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ, ಸ್ವಸಹಾಯ ಗುಂಪು, ಬೆಳ್ತಂಗಡಿ ತಾಲೂಕು ಒಕ್ಕಲಿಗರ ಗೌಡ ಸಂಘದಿಂದ ಸ್ತಬ್ಧ ಚಿತ್ರ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ, ಸ್ವಸಹಾಯ ಗುಂಪು, ಪುತ್ತೂರು ತಾಲೂಕು ಒಕ್ಕಲಿಗರ ಯಾನೆ ಗೌಡ ಸಂಘದಿಂದ ಸ್ತಬ್ಧ ಚಿತ್ರ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ, ಕಾಲಭೈರವೇಶ್ವರ ಮತ್ತು ಅಮ್ಮನವರ ರಥ, ಚೆಂಡೆ, ಸುಳ್ಯದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ಗೌಡ ಸಮಾಜ ಅಭಿವೃದ್ಧಿ ಸಂಘ ಶೋಭಾಯಾತ್ರೆಯಲ್ಲಿ ಭಾಗವಹಿಸಲಿದೆ ಎಂದು ಶೋಭಾಯಾತ್ರೆಯ ಸಂಚಾಲಕ ರಾಧಾಕೃಷ್ಣ ನಂದಿಲ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.