ಪುತ್ತೂರು: ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ ಅಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ 2023 ಜ. 22ರಂದು ಬೆಳಿಗ್ಗೆ 9.30ರಿಂದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.
ದ.ಕ.ಜಿ.ಪಂ. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ 3ನೇ ಸರಣಿ ಕಾರ್ಯಕ್ರಮ ಇದಾಗಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಉದ್ಘಾಟಿಸಲಿದ್ದಾರೆ. ಕಸಾಪ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸುವರು. ಪಿಡಿಓ ಸಂದೇಶ್ ಕೆ.ಎನ್., ಈಶ್ವರಮಂಗಲ ಶ್ರೀ ಗಜಾನನ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶಾಮಣ್ಣ, ಕರ್ನೂರು ಸ.ಹಿ. ಪ್ರಾಥಮಿಕ ಶಾಲಾ ಮುಖ್ಯಗುರು ರಮೇಶ್ ನೆಟ್ಟಣಿಗೆ ಮುಡ್ನೂರು, ಸಾಹಿತಿ ಮತ್ತು ಜೇನುಕೃಷಿಕ ಕುಮಾರ್ ಪೆರ್ನಾಜೆ ಮುಖ್ಯ ಅತಿಥಿಯಾಗಿರುವರು.
ಇದೇ ಸಂದರ್ಭ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸರೋಜಿನ ನಾಗಪಯ್ಯ ಮೇನಾಲ, ಜೇನುಕೃಷಿ ಮತ್ತು ಸಾಹಿತಿ ಕುಮಾರ್ ಪೆರ್ನಾಜೆ ದಂಪತಿ, ನಾಟಕ ರಚನೆ ಮತ್ತು ಕಲಾವಿದ ರಾಮ ಈಶ್ವರಮಂಗಲ, ಚಿತ್ರಕಲಾ ಕಲಾವಿದ ನಿಯಾಜ್ ಆಲಿ ಬಿ.ಎಂ., ನಿವೃತ್ತ ಮುಖ್ಯಗುರು ಹಾಗೂ ಯೋಗ ಶಿಕ್ಷಕ ಸದಾಶಿವ ರೈ ಎಸ್.ಎನ್., ಕರ್ನೂರು ಹಿ.ಪ್ರಾ. ಶಾಲಾ ನಿವೃತ್ತ ಮುಖ್ಯಗುರು ಪದ್ಮನಾಭ ರೈ ಬೆದ್ರಾಡಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಗುವುದು.
ಬೆಳಿಗ್ಗೆ 10.45ರಿಂದ 11.10ರವರೆಗೆ ಉಪನ್ಯಾಸ ಕಾರ್ಯಕ್ರಮ, 11.15ರಿಂದ 11.40ರವರೆಗೆ ಬಾಲಕಥಾ ಗೋಷ್ಠಿ, 11.45ರಿಂದ ಮಧ್ಯಾಹ್ನ 12.25ರವರೆಗೆ ಬಾಲಕವಿ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 12.30ರಿಂದ ಸಾಂಸ್ಕೃತಿಕ ಕಾರ್ಯಕ್ರ ನಡೆದು, 2ರಿಂದ ಯುವ ಕವಿಗೋಷ್ಠಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.