ಪುರುಷರಕಟ್ಟೆ: ಜ. 28ರಂದು ಸಾರ್ವಜನಿಕ ಶ್ರೀ ದುರ್ಗಾ ಪೂಜೆ

ಪುತ್ತೂರು: ಪುರುಷರಕಟ್ಟೆ ಹಿಂದು ಜಾಗರಣ ವೇದಿಕೆ ಶಿವಾಜಿ ಶಾಖೆಯ ಆಶ್ರಯದಲ್ಲಿ ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಮುಂಭಾಗ ಸಾರ್ವಜನಿಕ ಶ್ರೀ ದುರ್ಗಾ ಪೂಜೆ ಮತ್ತು ಅನ್ನ ಸಂತರ್ಪಣೆ ಜ. 28ರಂದು ನಡೆಯಲಿದೆ.

ಸಂಜೆ ಗಂಟೆ 6:30ಕ್ಕೆ ದುರ್ಗಾ ಪೂಜೆ ಆರಂಭಗೊಳ್ಳಲಿದ್ದು, ಬಳಿಕ ಪುರುಷರಕಟ್ಟೆ ದೇವಿನಗರ ವನದುರ್ಗಂಬಿಕಾ ಭಜನಾ ಮಂಡಳಿಯಿಂದ ಭಜನೆ, ರಾತ್ರಿ 7:30ಕ್ಕೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, 9.30ರಿಂದ ಪುತ್ತೂರು ವಿಶ್ವಕಲಾನಿಕೇತನ ಇನ್ ಸ್ಟಿಟ್ಯೂಷನ್  ಆಫ್ ಆರ್ಟ್ಸ್ ಆ್ಯಂಡ್ ಕಲ್ಚರಲ್ ಇವರಿಂದ ನೃತ್ಯ ವೈವಿಧ್ಯ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top