ಪುತ್ತೂರು: ಮುಂಡೂರಿನ ಕಂಪದಲ್ಲಿ ಮನೆ ಅಂಗಳದಲ್ಲಿ ಜಯಶ್ರೀ (23) ಎಂಬವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನಕಮಜಲಿನ ಅಂಗಾರ ಎಂಬವರ ಪುತ್ರ ಉಮೇಶ್ ಬಂಧಿತ.
ಉಮೇಶ್ ಜಯಶ್ರೀಯನ್ನು ಪ್ರೀತಿಸುತ್ತಿದ್ದು, ಬಿ.ಎಸ್.ಸಿ ಪದವೀಧರೆಯಾದ ಜಯಶ್ರೀ ಇತ್ತೀಚೆಗೆ ಅವನ ಗುಣ ನಡತೆ ಇಷ್ಟವಾಗದ ಕಾರಣ 2022ರ ನವೆಂಬರ್ ವೇಳೆಗೆ ಉಮೇಶನನ್ನು ದೂರ ಮಾಡಿದ್ದು, ಈ ಹಿನ್ನೆಲೆ ಕೋಪಗೊಂಡ ಉಮೇಶ್ ಆಕೆಯನ್ನು ಹತ್ಯೆ ಮಾಡಿದ್ದಾಗಿ ತನಿಖೆ ವೇಳೆ ತಿಳಿದು ಬಂದಿದೆ.
ಜಯಶ್ರೀ ತಾಯಿ ನೀಡಿದ ದೂರಿನ ಮೇರೆಗೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.