ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ | ಒಕ್ಕಲಿಗ ಸ್ವಸಹಾಯ ಸಂಘದ ಸದಸ್ಯರಿಗೆ ಸೀರೆ ಸಮವಸ್ತ್ರ

ಪುತ್ತೂರು: ಒಕ್ಕಲಿಗ ಸ್ವಸಹಾಯ ಸಂಘದ ಸುಮಾರು 5 ಸಾವಿರ ಮಹಿಳೆಯರು ಜ. 22ರಂದು ನಡೆಯಲಿರುವ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸಮವಸ್ತ್ರ ತೊಟ್ಟು, ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.

ಒಕ್ಕಲಿಗ ಸ್ವಸಹಾಯ ಸಂಘದಲ್ಲಿ ಸುಮಾರು 8 ಸಾವಿರ ಸದಸ್ಯರಿದ್ದು, ಇದರಲ್ಲಿ 5 ಸಾವಿರ ಮಂದಿ ಮಹಿಳೆಯರು. ಅವರಿಗೆ ಸಮವಸ್ತ್ರ ವಿತರಣೆ ಮಾಡಲಿದ್ದು, ಸಾಂಕೇತಿಕವಾಗಿ ಮಂಗಳವಾರ ಸಮಿತಿಯ ಕಾರ್ಯಾಲಯದಲ್ಲಿ ಸಮವಸ್ತ್ರ ವಿತರಿಸಲಾಯಿತು. ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಸಮವಸ್ತ್ರ ವಿತರಿಸಿ, ಶುಭಹಾರೈಸಿದರು.

ಒಕ್ಕಲಿಗ ಸ್ವಸಹಾಯ ಸಂಘವನ್ನು 7 ವಲಯಗಳಾಗಿ ವಿಂಗಡಿಸಲಾಗಿದೆ. ಒಂದೊಂದು ವಲಯಕ್ಕೂ ಒಂದೊಂದು ಬಣ್ಣದ ಸೀರೆಯನ್ನು ನೀಡಲಾಗಿದೆ. ಹಾಗಾಗಿ 7 ಬಣ್ಣದ ಸೀರೆಯುಟ್ಟು ಸದಸ್ಯೆಯರು ಕಾರ್ಯಕ್ರಮದಲ್ಲಿ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.































 
 

ಶಾಸಕ ಸಂಜೀವ ಮಠಂದೂರು, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಜಯಂತ್ಯೋತ್ಸವ ಜಿಲ್ಲಾ ಸಮಿತಿ ಸಂಚಾಲಕ ಚಿದಾನಂದ ಬೈಲಾಡಿ, ದಿನೇಶ್ ಮೆದು, ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ. ನಾರಾಯಣ, ಅಧ್ಯಕ್ಷ ಮನೋಹರ್ ಡಿ.ವಿ., ಜಯಂತ್ಯೋತ್ಸವ ಸಮಿತಿಯ ತಾಲೂಕು ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ಕಾರ್ಯದರ್ಶಿ ನಾಗೇಶ್ ಕೆಡೆಂಜಿ, ಆರ್ಥಿಕ ಸಮಿತಿಯ ಯು.ಪಿ. ರಾಮಕೃಷ್ಣ, ಅಮರನಾಥ್ ಬಪ್ಪಳಿಗೆ, ಗೌರಿ ಬನ್ನೂರು, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ. ಗೌಡ, ರಾಧಾಕೃಷ್ಣ ಗೌಡ ನಂದಿಲ, ರಾಧಾಕೃಷ್ಣ ಗೌಡ ಬನ್ನೂರು, ವೆಂಕಪ್ಪ ಗೌಡ, ಲಿಂಗಪ್ಪ ಗೌಡ ತೆಂಕಿಲ, ಕಿಶೋರ್ ಬೇರಿಕೆ, ರವಿ ಮುಂಗ್ಲಿಮನೆ, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಮೇಲ್ವಿಚಾರಕರಾದ ಸುಮಲತಾ, ವಿಜಯಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top