ಗ್ಯಾಸ್‌ ಸಿಲಿಂಡರ್‌ ತುಂಬಿಸಿಕೊಡಲಿದೆ ಕಾಂಗ್ರೆಸ್‌

ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ಪುಕ್ಕಟೆ ಕೊಡುಗೆ

ಬೆಂಗಳೂರು: ಮತದಾರರನ್ನು ಸೆಳೆಯಲು 200 ಯುನಿಟ್‌ ತನಕ ಉಚಿತ ವಿದ್ಯುತ್‌ ಕೊಡುವ ಭರವಸೆ ನೀಡಿದ್ದ ಕಾಂಗ್ರೆಸ್‌ ಇದೀಗ ಎರಡನೇ ಕೊಡುಗೆಯಾಗಿ ಮಹಿಳಾ ಮತದಾರರ ಮನಗೆಲ್ಲುವ ಸಲುವಾಗಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ಕೊಡುವ ಇನ್ನೊಂದು ಆಕರ್ಷಕ ಪುಕ್ಕಟೆ ಕೊಡುಗೆಯ ಘೋಷಣೆ ಮಾಡಿದೆ.
ಸೋಮವಾರ ಬೆಂಗಳೂರಿನಲ್ಲಿ ನಡೆದ ನಾ ನಾಯಕಿ ಸಮಾವೇಶದಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮೀ ಎಂಬ ಯೋಜನೆಯನ್ನು ಘೋಷಿಸಿದ್ದಾರೆ. ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ಕೊಡುವುದೇ ಗೃಹಲಕ್ಷ್ಮೀ ಯೋಜನೆ.

ಪ್ರತಿ ಕುಟುಂಬದ ಓರ್ವ ಗೃಹಿಣಿಗೆ ಪ್ರತಿ ತಿಂಗಳು 2 ಸಾವಿರ ರೂ. ಸಹಾಯಧನ ‘ಗೃಹಲಕ್ಷ್ಮಿ’ ಯೋಜನೆಯಯಡಿ ಸಿಗಲಿದೆ. ಇದು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟ್ರಂಪ್‌ಕಾರ್ಡ್‌ ಆಗಲಿದೆ ಎನ್ನಲಾಗಿದೆ. ನಗರದ ಅರಮನೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ‘ನಾ ನಾಯಕಿ’ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಯೋಜನೆಗೆ ಸಂಬಂಧಿಸಿದ ಭಿತ್ತಪತ್ರ ಅನಾವರಣಗೊಳಿಸಿ ಅಧಿಕೃತವಾಗಿ ಯೋಜನೆಯನ್ನು ಘೋಷಿಸಿದ್ದಾರೆ.































 
 

ರಾಜ್ಯ ಕಾಂಗ್ರೆಸ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ 2 ಸಾವಿರ ರೂ. ರಾಜ್ಯದ ಮಹಿಳೆಯರಿಗೆ ಗ್ಯಾಸ್‌ ಸಿಲಿಂಡರ್‌ ತುಂಬಿಸಲು ಕಾಂಗ್ರೆಸ್‌ ಪ್ರತಿ ತಿಂಗಳು ನೀಡಲಿರುವ ಹಣ ಎಂದು ಹೇಳಿಕೊಂಡಿದೆ. ಈ ಕುರಿತಾದ ಪೋಸ್ಟರ್‌ ಕೂಡ ತಯಾರಿಸಿ ಹಂಚಿಕೊಂಡಿದೆ. ಇದರಲ್ಲಿ
ರಾಜ್ಯದ ಮಹಿಳೆಯರೇ ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆ ಎಂಬ ಚಿಂತೆ ಬಿಡಿ. ನಿಮ್ಮ ಮನೆಯ ಸಿಲಿಂಡರ್ ತುಂಬಿಸುವುದು ಇನ್ಮುಂದೆ ಕಾಂಗ್ರೆಸ್ ಹೊಣೆ ಎಂದು ಹೇಳಿಕೊಂಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top