ಪುತ್ತೂರು: ಮುನಿ ಪುಂಗವರ ತಪಸ್ಸಿನ ಕೇಂದ್ರ ಪಂಚವಟಿಗೆ ಪೌರಾಣಿಕ ಮಹತ್ವ. ಪುತ್ತೂರಿನ ಆರ್.ಎಸ್.ಎಸ್. ಶಿಸ್ತುಬದ್ಧ ಸಿಪಾಯಿಗಳ ಕಾರ್ಯಾಲಯ ಪಂಚವಟಿಗೆ ಐತಿಹಾಸಿಕ ಮಹತ್ವ. ಸೋಮವಾರ ನಡೆದ ಶಿಸ್ತಿನ ಸಮಾರಂಭದಲ್ಲಿ ಪಂಚವಟಿ ಲೋಕಾರ್ಪಣೆಗೊಂಡಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ್ ಅವರು ಬೌದ್ಧಿಕಲ್ಲಿ ತಿಳಿಸಿದಂತೆ, “ಪುತ್ತೂರು ಜಿಲ್ಲೆಯ ಆರ್.ಎಸ್.ಎಸ್ ಕಾರ್ಯಾಲಯ ದೇಶಕ್ಕೆ ಮಾದರಿಯಾಗಿ ನಿಂತಿದೆ”. ಹಿಂದೆ ಪಂಚವಟಿ ಇದ್ದ ಜಾಗದಲ್ಲೇ ಹೊಸ ಕಟ್ಟಡ ತಲೆಎತ್ತಿದೆ. ಎರಡಂತಸ್ತಿನ ಬೃಹತ್ ಕಟ್ಟಡ, ಆರ್.ಎಸ್.ಎಸ್. ಕಾರ್ಯಚಟುವಟಿಕೆಗಳಿಗೆ ತೆರೆದುಕೊಂಡಿದೆ. ಕೇಶವಸ್ಮೃತಿ ಸಂವರ್ಧನ ಸಮಿತಿಯಡಿ ನಿರ್ಮಾಣಗೊಂಡ ಪಂಚವಟಿ ಸಂಘ ಕಾರ್ಯಾಲಯ ಲೋಕಾರ್ಪಣೆ ಸಮಾರಂಭದ ಝಲಕ್ ಅನ್ನು ಫೊಟೋಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
ಸಂಜೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿಬಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾವಿರಾರು ಕಾರ್ಯಕರ್ತರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಸಮಾವೇಶಗೊಂಡರು.
ಸಭೆಗೆ ಮೆರುಗು ತಂದ ಗಣ್ಯರು:
ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಡಾ|ವಾವನ ಶೆಣೈ, ಪುತ್ತೂರು ಜಿಲ್ಲಾ ಸಂಘ ಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಚಿವ ಎಸ್.ಅಂಗಾರ, ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜ, ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹಕ ಪ್ರಕಾಶ್ ಪಿ.ಎಸ್., ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ್ ಗುರುಪ್ರಸಾದ್, ಕರ್ನಾಟಕ ದಕ್ಷಿಣ ಪ್ರಾಂತ ಸಹ ಪ್ರಚಾರಕ್ ನಂದೀಶ್, ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ, ಹಿಂದು ಸೇವಾ ಪ್ರತಿಷ್ಠಾನದ ರಾಜ್ಯ ಸಂಚಾಲಕ ಸುಧಾಕರ್, ಅಖಿಲ ಭಾರತೀಯ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಡಾ|ಪ್ರಭಾಕರ ಭಟ್ ಕಲ್ಲಡ್ಕ, ವನವಾಸಿ ಕಲ್ಯಾಣ ಆಶ್ರಮದ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಶ್ರೀಪಾದ್, ಆರೋಗ್ಯಭಾರತಿ ಕ್ಷೇತ್ರ ಸಂಘಟನಾ ಮಂತ್ರಿ ಸದಾಶಿವ, ಪ್ರಾಂಥ ಶಾರಿರೀಕ್ ಪ್ರಮುಖ್ ಸತೀಶ್ ಕುತ್ತಾರು, ಕರ್ನಾಟಕ ಪ್ರಾಂತ ಘೋಷ್ ಪ್ರಮುಖ್ ಗಿರೀಶ್, ಪ್ರಾಂತದ ವೆಂಕಟೇಶ್, ಸೀತಾರಾಮ ಕೆದಿಲಾಯ ಉಪಸ್ಥಿತರಿದ್ದರು.
ವಿಭಾಗ ಶಾರೀಕ್ ವಿನೋದ್ ಸ್ವಾಗತಿಸಿದರು. ನವೀನ್ ಕೈಕಾರ ವಂದಿಸಿದರು.
“ಪ್ರಭೋ ಶಕ್ತಿಮನ್ ಹಿಂದು ರಾಷ್ಟ್ರಾಂಗ ಭೂತಾ”
ಸಂಘ 100 ವರ್ಷ ಸಮೀಪದಲ್ಲೇ ಇದ್ದರೂ, ಇನ್ನು ಯೌವ್ವನದಿಂದಲೇ ಕೂಡಿದೆ. ವರ್ಷಕ್ಕೆ 20 ಸಾವಿರಕ್ಕೂ ಅಧಿಕ ಜನರು ಸಂಘದ ತರಬೇತಿ ಪಡೆದುಕೊಳ್ಳುತ್ತಾರೆ. ಅವರ ಸರಾಸರಿ ವಯಸ್ಸು 18. 8 ದಿನಗಳ ಪ್ರಾಥಮಿಕ ಶಿಕ್ಷಾ ವರ್ಗ ನಡೆಯುತ್ತದೆ. ಇದರಲ್ಲಿ ಭಾಗವಹಿಸುವವರ ಸರಾಸರಿ ವಯಸ್ಸು 15 – 16. ಅಂದರೆ ಸಂಘದ ಭರವಸೆಯೇ ನವಪೀಳಿಗೆ. ಸಂಘವು ಹಳೆಯದನ್ನು ಉಳಿಸಿಕೊಂಡು, ಹೊಸ ಕಾಲಘಟ್ಟಕ್ಕೆ ತಕ್ಕಂತೆ ತನ್ನನ್ನು ತಾನು ತೆರೆದುಕೊಂಡಿದೆ. ಹಾಗಾಗಿ ಸಂಘ ಇಂದಿಗೂ ಪ್ರಸ್ತುತ. ದೇಶದಲ್ಲಿ ಅಶ್ಪೃಶತೆ, ಬೇಧ ಭಾವದ ಮನಸ್ಥಿತಿ ಪೂರ್ತಿಯಾಗಿ ನಿರ್ಮೂಲನೆಯಾಗಿಲ್ಲ. ಇದನ್ನು ಬದಲಾಯಿಸುವ ಸಾಮಾಜಿಕ ಪರಿವರ್ತನೆಯ ಕಾರ್ಯ ಸಂಘದ ಉದ್ದೇಶವಾಗಿದೆ. ಇಂತಹ ಕಾರ್ಯಕ್ಕೆ ಪ್ರಭು ಶಕ್ತಿ ನೀಡು ಎಂದು ಬೇಡುತ್ತೇವೆ. ಅದೇ ಯವ್ವನ.
| ಮುಕುಂದ, ಸಹ ಸರಕಾರ್ಯವಾಹ, ರಾಷ್ಟ್ರೀಯ ಸ್ವಯಂ ಸೇವಕ ಸಂಘ