ಸಂತಫಿಲೋಮಿನಾ ಕಾಲೇಜಿನ ವಾರ್ಷಿಕ ಸಂಚಿಕೆ “ಫಿಲೋಪ್ರಭಾ” ಬಿಡುಗಡೆ

ಪುತ್ತೂರು:ಸಂತ ಫಿಲೋಮಿನಾ ಕಾಲೇಜಿನ ವಾರ್ಷಿಕ ಸಂಚಿಕೆಯಾದ ʼಫಿಲೋಪ್ರಭಾʼ ವನ್ನು ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿಪ್ರಕಾಶ್‌ ಮೊಂತೆರೋರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು“ವಿದ್ಯಾರ್ಥಿಗಳಲ್ಲಿ ಬರೆಯುವ ಕೌಶಲ್ಯವನ್ನು ಅಭಿವೃದ್ಧಿಗೊಳಿಸಲು ಮತ್ತು ಸೃಜನ ಶೀಲತೆಯನ್ನು ಹೆಚ್ಚಿಸಲು ಕಾಲೇಜಿನ ವಾರ್ಷಿಕ ಸಂಚಿಕೆ ಬಹಳ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ತಮಗಿಷ್ಟವಿರುವ ಭಾಷೆಯಲ್ಲಿ ಈ ಸಂಚಿಕೆಯಲ್ಲಿ ವ್ಯಕ್ತಪಡಿಸಿರುತ್ತಾರೆ.

ವಿದ್ಯಾರ್ಥಿಗಳಿಗೆ ಪ್ರೇರೇಪಣೆ ನೀಡಿ ಅವರು ಉತ್ತಮ ಕಥೆ, ಕವನ, ಅನಿಸಿಕೆ ಮುಂತಾದವುಗಳನ್ನು ಬರೆಯುವಲ್ಲಿ ಮಾರ್ಗದರ್ಶನ ನೀಡಿದ ಫಿಲೋಪ್ರಭಾ ಸಂಚಿಕೆಯ ಸಂಪಾದಕ ಮಂಡಳಿಯ ಶ್ರಮ ಶ್ಲಾಘನೀಯ ಎಂದು ಹೇಳಿದರು. ಫಿಲೋಪ್ರಭಾದ ಸಂಪಾದಕರಾದ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ| ವಿನಯಚಂದ್ರರವರು ಬರೆ ಮತ್ತು ಪ್ರಕಟಿಸು ಎಂಬ ಅಡಿ ಬರಹದಲ್ಲಿ ವಿದ್ಯಾರ್ಥಿಗಳ ಅನಿಸಿಕೆಗಳನ್ನು ಹಾಗೂ ಕಾಲೇಜಿನ ಚಟುವಟಿಕೆಗಳನ್ನು ವಾರ್ಷಿಕ ಸಂಚಿಕೆಯ ರೂಪದಲ್ಲಿ ಪ್ರಕಟಿಸಲಾಗಿದೆ.

ಈ ಸಂಚಿಕೆಯು ವಿದ್ಯಾರ್ಥಿಗಳ ಸಕಾರಾತ್ಮಕ ಚಿಂತನೆ ಹಾಗೂ ಸೃಜನ ಶೀಲತೆಯ ಫಲವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಸಂಚಿಕೆಯನ್ನು ಸ್ಪಷ್ಟಪಡಿಸುವಲ್ಲಿ ಸಹಕಾರ ನೀಡಿದ ಪ್ರಾಂಶುಪಾಲರು ಹಾಗೂ ಸಂಪಾದಕ ಮಂಡಳಿಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಫಿಲೋಪ್ರಭಾ ಸಂಪಾದಕ ಮಂಡಳಿಯ ಸದಸ್ಯರಾದ ಡಾ|  ವಿಜಯಕುಮಾರ್‌ .ಎಂ ಸ್ವಾಗತಿಸಿದರು, ಶ್ರೀಮತಿ ಭಾರತಿ.ಎಸ್‌ ರೈವಂದಿಸಿದರು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top