ಪುತ್ತೂರು: ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಜ. 14ರಂದು ಬೆಳಿಗ್ಗೆ 5ಕ್ಕೆ ಧನು ಪೂಜೆ, ಬಳಿಕ ಶ್ರೀ ಗಣಪತಿ ಹೋಮ, ಭಗವತಿ ತ್ರಿಕಾಲ ಪೂಜೆ, ತತ್ವ ಕಲಶ ಹೋಮ, ತತ್ವ ಕಲಶಾಭಿಷೇಕ ಜರಗಿತು.
ಬೆಳಂದೂರು ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ,ಬಿ.ಸಿ ಟ್ರಸ್ಟ್, ಅಬೀರ ಕೊಡಿಮಾರು ಗೆಳೆಯರ ಬಳಗದಿಂದ ಭಜನೆ ಜರಗಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಮಧಾಹ್ನ ಸವಣೂರು ಶ್ರವಣ ರಂಗ ಪ್ರತಿಷ್ಠಾನದಿಂದ ಯಕ್ಷಗಾನ ತಾಳಮದ್ದಳೆ, ಭಕ್ತಕೋಡಿ ಶ್ರೀ ರಾಮ ಭಜನಾ ಮಂಡಳಿ, ನೆಟ್ಟಣ ಶ್ರೀ ವಿಘ್ನೇಶ್ವರ ಭಜನಾ ಮಂಡಳಿಯಿಂದ ಭಜನೆ ಜರಗಿತು. ಸಂಜೆ 5.30ರಿಂದ ಬೆಳಂದೂರು ಅಂಗನವಾಡಿ ಪುಟಾಣಿ ಗಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.
ಸಂಜೆ 6ಕ್ಕೆ ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮಯ್ಯ ಗೌಡ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ರಾತ್ರಿ 8.30ರಿಂದ ನಾರ್ಯಬೈಲು ಕಿ.ಪ್ರಾ.ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9ರಿಂದ ರಂಗ ಚಕ್ರವರ್ತಿ ಸುಬ್ಬು ಸಂಟ್ಯಾರು ನಿರ್ದೇಶನದಲ್ಲಿ ತುಳು ಹಾಸ್ಯಮಯ ನಾಟಕ ಮುನ್ನೆ ಮುನಿಯೆನಾ ಪ್ರದರ್ಶನಗೊಳ್ಳಲಿದೆ.