ಪುತ್ತೂರು: ಪಾಣಾಜೆ ಬಿ.ಬಿ. ಕ್ರಿಯೇಷನ್ ಪ್ರಾಯೋಜಕತ್ವದಲ್ಲಿ ಬೆಟ್ಟಂಪಾಡಿಯಲ್ಲಿ ಜ. 11ರಂದು ರಾತ್ರಿ ನಡೆದ ಯಕ್ಷಗಾನ ಸಂದರ್ಭ ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಕರ್ನಾಟಕ, ನೊಂದವರ ಪಾಲಿಗೆ ಆಸರೆ ವತಿಯಿಂದ 189ನೇ ಸೇವಾಯೋಜನೆ ನಡೆಯಿತು.

ಅನಾರೋಗ್ಯದಿಂದ ಬಳಲುತ್ತಿರುವ ಸುಹಾಸಿನಿ ಎಂಬ ಬಾಲಕಿಗೆ ನೆರವಾಗುವ ನಿಟ್ಟಿನಲ್ಲಿ ಸಹಾಯಧನ ಸಂಗ್ರಹಿಸಲಾಯಿತು.ಬಳಿಕ ಸಮಾರಂಭದಲ್ಲಿ ನಟ ದೀಪಕ್ ರೈ ಪಾಣಾಜೆ, ಯಕ್ಷಧ್ರುವ ಸತೀಶ್ ಶೆಟ್ಟಿ ಪಟ್ಲ ಅವರ ಉಪಸ್ಥಿತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಗೆ ಹಸ್ತಾಂತರಿಸಲಾಯಿತು.
ಟ್ರಸ್ಟಿನ ಅಧ್ಯಕ್ಷ ಡಿ.ಎಸ್. ಒಡ್ಯ, ಕಾರ್ಯದರ್ಶಿ ಮನೋಹರ್ ಪಲಯಮಜಲು, ಆಸರೆ ತಂಡದ ಅಣ್ಣಪ್ಪ ಉಪಸ್ಥಿತರಿದ್ದರು. ಪಾಣಾಜೆ ಬಿ. ಬಿ. ಕ್ರಿಯೇಷನ್ ಪದಾಧಿಕಾರಿಗಳು ಸಹಕರಿಸಿದರು.