ಪುತ್ತೂರು: ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪನಿ, ಕುದ್ಮಾರು ನೇತೃತ್ವದಲ್ಲಿ 40 ಮಂದಿ ರೈತರು ಆನೇಕಲ್ ರೈತ ಉತ್ಪಾದಕ ಸಂಸ್ಥೆ ಸೇರಿದಂಥೆ ಬೆಂಗಳೂರಿನ ವಿವಿಧೆಡೆಗೆ ಪ್ರವಾಸ ಕೈಗೊಂಡರು.
ಸಂಸ್ಥೆಯ ಕಾರ್ಯ ಚಟುವಟಿಕೆಯ ಬಗ್ಗೆ ಮತ್ತು ಬೆಳವಣಿಗೆಯ ಬಗ್ಗೆ ಸಂಸ್ಥೆಯ ಲೆಕ್ಕಪರಿಶೋಧಕಿ ಶ್ಯಾಮಲಾ ಅವರಿಂದ ತರಬೇತಿ ಪಡೆದರು. ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ ಬೆಂಗಳೂರು ಸಂಸ್ಥೆಗೆ ರೈತರ ತಂಡ ಭೇಟಿ ನೀಡಿ ತರಕಾರಿ ಬೆಳೆ, ಹಣ್ಣು ಹಂಪಲು ಸೇರಿದಂತೆ ಹಲವಾರು ಕೃಷಿಯನ್ನು ಬೆಳೆಸುವ ಬಗ್ಗೆ ಸಂಶೋಧನ ವಿಜ್ಞಾನಿಗಳಿಂದ ತರಬೇತಿ ಪಡೆದುಕೊಂಡರು.
ಕಾಣಿಯೂರು ಸವಣೂರು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಗಿರಿಶಂಕರ ಸುಲಾಯ ಮತ್ತು ನಿರ್ದೇಶಕರಾದ ಧನಂಜಯ ಕೇಣಾಜೆ, ಶ್ರೀಧರ ಸುಣ್ಣಾಜೆ, ಸುಬ್ರಾಯ ಗೌಡ ಪಾಲ್ತಾಡಿ, ನಿರ್ಮಲ ಕೇಶವ ಗೌಡ ಅಮೈ, ಶಿವರಾಮ ಗೌಡ, ಸದಾನಂದ ಸೌತೆಮಾರು, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿಕೇಶ್ ಗೌಡ ಎಡಮಂಗಳ, ಡಾಟಾ ಆಪರೇಟರ್ ಅಶೋಕ್ ಬಾರೆಂಗಳ, ಐಸಿಸಿಓಎ ಸಂಸ್ಥೆಯ ಯೋಜನಾಧಿಕಾರಿ ಸತೀಶ್ ನಾಯ್ಕ್, ಸ್ಥಳೀಯ ಸಂಪನ್ಮೂಲ ವ್ಯಕ್ತಿ ಧರ್ಮೇಂದ್ರ ಗೌಡ ಕಟ್ಟತ್ತಾರು, ರಾಜೇಶ್ ರೈ ಮುಗೇರು ಮತ್ತು ಸಂಸ್ಥೆಯ ರೈತರು ಪ್ರವಾಸದಲ್ಲಿ ಭಾಗಿಯಾದರು.