ಜನನ ಮರಣ, ವ್ಯಾಪಾರ ಅರ್ಜಿ ವಿಲೇ ಕಾರ್ಯ ವಿಳಂಬ | ಪುತ್ತೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ

ಪುತ್ತೂರು: ಜನನ ಮರಣ ಅರ್ಜಿಗಳು ಪೆಂಡಿAಗ್ ಇದೆ. ವಿಲೇವಾರಿ ಕಾರ್ಯದಲ್ಲಿ ವಿಳಂಬ ಆಗುತ್ತಿದೆ ಎಂದು ನಗರಸಭಾ ಸದಸ್ಯರು ಆರೋಪಿಸಿದರು.


ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪುತ್ತೂರು ನಗರಸಭಾ ಸಾಮಾನ್ಯಸಭೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡಿತು.


ಅರ್ಜಿ ಸಲ್ಲಿಸಿದ ಸಾರ್ವಜನಿಕರನ್ನು ನಗರಸಭೆ ಅಧಿಕಾರಿ, ಸಿಬ್ಬಂದಿಗಳು ಸತಾಯಿಸುತ್ತಿರುವ ವಿಷಯದ ಬಗ್ಗೆ ಪ್ರಸ್ತಾಪಿಸಿದ, ಮಹಮ್ಮದ್ ರಿಯಾಝ್ ಅವರು ಜನನ ಮರಣ ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಸಮಸ್ಯೆ ಕ್ಲಿಷ್ಟಗೊಳಿಸಿ ಗೊಂದಲ ಮೂಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.































 
 


ಪ್ರತಿಕ್ರಿಯಿಸಿದ ಅಧ್ಯಕ್ಷರು ಸಕಾಲದಲ್ಲಿ ಸಲ್ಲಿಸಲಾಗಿರುವ ಅರ್ಜಿಗಳು ಯಾವುದೂ ಪೆಂಡಿAಗ್ ಉಳಿದಿಲ್ಲ. ಅಲ್ಲದೆ ತಾನು ಪ್ರತಿಯೊಂದು ಸಭೆಯಲ್ಲಿಯೂ ಅರ್ಜಿಗಳ ವಿಲೇವಾರಿ ಬಗ್ಗೆ ಸಿಬ್ಬಂದಿಗಳೊoದಿಗೆ ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇನೆ. ಅಲ್ಲದೆ ಪೌರಾಯುಕ್ತರೂ ಈ ಬಗ್ಗೆ ನಿರಂತರ ಪರಿಶೀಲನೆ ನಡೆಸುತ್ತಿದ್ದಾರೆ. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದoತೆ ಕ್ರಮ ಕೈಗೊಳ್ಳಲಾಗುವುದು ಎಂದರು.


ಪೌರಾಯುಕ್ತ ಮಧು ಎಸ್ ಮನೋಹರ್ ಮಾತನಾಡಿ, ತಾಂತ್ರಿಕ ತೊಂದರೆಗಳ ಹೊರತುಪಡಿಸಿ ಉಳಿದಂತೆ ಅರ್ಜಿಗಳ ವಿಲೇವಾರಿ ಸಮರ್ಪಕವಾಗಿ ನಡೆಸಲಾಗುತ್ತಿದೆ. ಸಕಾಲದಲ್ಲಿನ 17 ಸೇವೆಗಳ ಬಗ್ಗೆ ಕಚೇರಿಯ ಮುಂಬಾಗದಲ್ಲಿ ಬೋರ್ಡ್ ಹಾಕಿ ವಿಲೇವಾರಿ ದಿನಾಂಕದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮಹಮ್ಮದ್ ರಿಯಾಝ್ ಮಾತು ಮುಂದುವರಿಸಿ, ಉದ್ಯಮ ಪರವಾನಿಗೆ ವಿಚಾರದಲ್ಲೂ ಅರ್ಜಿಗಳು ವಿಲೇ ಆಗುತ್ತಿಲ್ಲ. ಇದರ ಬಗ್ಗೆಯೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕರೆ ಸ್ವೀಕರಿಸುತ್ತಿಲ್ಲ:
ಸದಸ್ಯೆ ಶೈಲಾ ಪೈ ಮಾತನಾಡಿ, ಸಮಸ್ಯೆಗಳ ಬಗ್ಗೆ ನಗರಸಭೆ ಅಧಿಕಾರಿ, ಸಿಬ್ಬಂದಿಗಳ ಗಮನಕ್ಕೆ ತರಲು ಹೋದರೆ, ಕಚೇರಿಯಲ್ಲೇ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ. ನಮ್ಮ ಕರೆಗೆ ಬೆಲೇಯೇ ನೀಡುತ್ತಿಲ್ಲ ಎಂದು ಆರೋಪಿಸಿದರು.
ಉತ್ತರಿಸಿದ ಅಧ್ಯಕ್ಷ ಜೀವಂಧರ್ ಜೈನ್, ಸದಸ್ಯರು ಸಮಸ್ಯೆಗಳ ಬಗ್ಗೆ ಸಂಬoಧಿಸಿದ ಅಧಿಕಾರಿಗಳ ಜೊತೆಗೆ ಮಾತನಾಡಿ ಅವರಿಂದ ಸಿಬ್ಬಂದಿಗಳಿಗೆ ಸೂಚನೆ ನೀಡುವಂತೆ ತಿಳಿಸುವುದು ಉತ್ತಮ ಎಂದು ಸಲಹೆ ನೀಡಿದರು. ಮುಂದೆ ಯಾವುದೇ ಸದಸ್ಯರು ಕರೆ ಮಾಡಿದಾಗ ಅಗೌರವ ತೋರಿಸಬಾರದು. ಈ ಬಗ್ಗೆ ಸಿಬ್ಬಂದಿಗಳಿಗೆ ಸೂಚನೆ ನೀಡಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು.

ಎಸ್‌ಆರ್ ದರ ನಿಗದಿ:
ನಗರಸಭಾ ವ್ಯಾಪ್ತಿಯ ರಸ್ತೆಗಳನ್ನು ಅಗೆತ ಮಾಡುವ ಸಂದರ್ಭದಲ್ಲಿ ನಗರಸಭೆಯಿಂದ ಎಸ್‌ಆರ್ ದರ ನಿಗದಿಪಡಿಸಲಾಗುತ್ತಿದ್ದು, ಪ್ರತೀ ಮೀಟರ್‌ಗೆ ಮಣ್ಣಿನ ರಸ್ತೆಗೆ ರೂ. 280, ಡಾಮರು ರಸ್ತೆಗೆ ರೂ. 1292, ಕಾಂಕ್ರಿಟ್ ರಸ್ತೆಗೆ ರೂ. 1786, ಇಂಟರ್‌ಲಾಕ್ ರಸ್ತೆಗೆ ರೂ. 700 ನಿಗದಿ ಪಡಿಸುವ ಬಗ್ಗೆ ಅಧ್ಯಕ್ಷರು ಸಭೆಯಲ್ಲಿ ಮಂಡಿಸಿದರು. ಮಣ್ಣು ರಸ್ತೆಗೆ ದರ ವಿಧಿಸುವುದು ಬೇಡ. ಅದನ್ನು ಹೊರತುಪಡಿಸಿ ಉಳಿದ ರಸ್ತೆಗಳಿಗೆ ದರ ವಿಧಿಸೋಣ ಎಂದು ಸದಸ್ಯ ಸುಂದರ ಪೂಜಾರಿ ಅವರು ಸಲಹೆ ನೀಡಿದರು. ಇದಕ್ಕೆ ಇತರ ಸದಸ್ಯರೂ ಧ್ವನಿಗೂಡಿಸಿದರು. ಅದರಂತೆ ಮಣ್ಣು ರಸ್ತೆ ಹೊರತುಪಡಿಸಿ ಉಳಿದ ರಸ್ತೆಗಳಿಗೆ ನಿಗದಿತ ಎಸ್‌ಆರ್ ದರ ವಿಧಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಾರ್ಗಸೂಚಿಯಂತೆ ತ್ಯಾಜ್ಯ ವಿಲೇ:
ನಗರಸಭೆಯ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿನ ಪಾರಂಪರಿಕ ತ್ಯಾಜ್ಯವನ್ನು ರಾಜ್ಯ ಮಾಲಿನ್ಯ ನಿಯಂತ್ರಣದ ಮಾರ್ಗಸೂಚಿಯಂತೆ ವಿಲೇವಾರಿಗೊಳಿಸಬೇಕಾಗಿದೆ. ಈ ಬಗ್ಗೆ ರೂ. 1.96 ಕೋಟಿಯ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ಈ ಪೈಕಿ ಒಟ್ಟು ಮೊತ್ತದ 16 % ನಗರಸಭೆಯಿಂದ ಭರಿಸಬೇಕಾಗಿದ್ದು, 50% ಕೇಂದ್ರ ಸರ್ಕಾರ ಭರಿಸಲಿದೆ. ಉಳಿದ ಹಣವನ್ನು ರಾಜ್ಯ ಸರ್ಕಾರವು ಭರಿಸಲಿದೆ. ತ್ಯಾಜ್ಯದ ಪ್ರಮಾಣವನ್ನು ಗುರುತಿಸಲು ಡ್ರೋನ್ ಮ್ಯಾಪಿಂಗ್ ಸಮೀಕ್ಷೆ ನಡೆಸುವುದು ಅವಶ್ಯಕವಾಗಿದೆ. ಇದಕ್ಕಾಗಿ ದರಪಟ್ಟಿ ಆಹ್ವಾನಿಸಲಾಗಿದೆ. ಕಡಿಮೆ ದರಪಟ್ಟಿ ಸಲ್ಲಿಸಿದವರಿಗೆ ಅನುಮೋದನೆ ನೀಡಲಾಗುವುದು ಎಂದು ಪೌರಾಯುಕ್ತರು ಸಭೆಗೆ ತಿಳಿಸಿದರು. ಕಡಿಮೆ ದರಪಟ್ಟಿ ನೀಡಿದವರಿಗೆ ಸಮೀಕ್ಷೆ ನಡೆಸಲು ಅನುಮೋದನೆ ನೀಡಲಾಯಿತು.

ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆ. ಉಪಸ್ಥಿತರಿದ್ದರು. ಪೌರಾಯುಕ್ತ ಮಧು ಎಸ್ ಮನೋಹರ್ ಸ್ವಾಗತಿಸಿ, ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top