ಪುತ್ತೂರು: ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮಾಚಿಲ ಶ್ರೀ ಉಳ್ಳಾಕುಲು ಹಾಗೂ ಶ್ರೀ ಉಳ್ಳಾಲ್ತಿ ಪ್ರತಿಷ್ಠೆ ಮತ್ತು ನೇಮೋತ್ಸವ ಜ. 7ರಂದು ಸಂಪನ್ನಗೊಂಡಿತು.


ಡಿ 31ರಿಂದ ಮೊದಲ್ಗೊಂಡು ಜ7ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ ಮತ್ತು ಮಾಚಿಲ ಶ್ರೀ ಉಳ್ಳಾಕುಲು ಹಾಗೂ ಶ್ರೀ ಉಳ್ಳಾಲ್ತಿ ಪ್ರತಿಷ್ಠೆ ಮತ್ತು ನೇಮೋತ್ಸವ ನಡೆಯಿತು. ಜ. 7ರಂದು ಬೆಳಿಗ್ಗೆ ಶ್ರೀ ಉಳ್ಳಾಕ್ಲು ನೇಮೋತ್ಸವ, ಸಂಜೆ ಶ್ರೀ ಉಳ್ಳಾಲ್ತಿ ಭಂಡಾರ ತೆಗೆದು, ಶ್ರೀ ನಾಲ್ಕಂಭ ಕ್ಷೇತ್ರಕ್ಕೆ ಶ್ರೀ ಉಳ್ಳಾಲ್ತಿ ಭಂಡಾರ ಆಗಮನ, ಬಳಿಕ ಶ್ರೀ ಉಳ್ಳಾಲ್ತಿ ನೇಮೋತ್ಸವ ನಡೆಯಿತು.