ಸಮ್ಮದ್ ಶಿಖರ್‌ಜಿಗಾಗಿ ಸಲ್ಲೇಖನ ವ್ರತ ಕೈಗೊಂಡಿದ್ದ ಜೈನ ಸನ್ಯಾಸಿ ಸಾವು

ಪ್ರವಾಸಿ ತಾಣ ಮಾಡಿದ ನಿರ್ಧಾರ ವಿರೋಧಿಸಿ ಸಲ್ಲೇಖನ ವ್ರತ

ಜಾರ್ಖಂಡ್: ಶ್ರೀ ಸಮ್ಮದ್ ಶಿಖರ್‌ಜಿಯನ್ನು ಪ್ರವಾಸಿ ಸ್ಥಳವಾಗಿ ಘೋಷಿಸಿದ ಜಾರ್ಖಂಡ್ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲೇಖನ ವ್ರತ ಕೈಗೊಂಡಿದ್ದ ಜೈನ ಸನ್ಯಾಸಿ ಸಮರ್ಥ್ ಸಾಗರ್ (74) ಎಂಬವರು ಮೃತಪಟ್ಟಿದ್ದಾರೆ.
ಜೈಪುರದಲ್ಲಿ ಸಮರ್ಥ್ ಸಾಗರ್ ನಿಧನರಾಗಿದ್ದು, ಕಳೆದ 5 ದಿನಗಳಿಂದ ಅವರು ಸಲ್ಲೇಖನ ವ್ರತ ಕೈಗೊಂಡಿದ್ದರು. ಇದಕ್ಕೂ ಮುನ್ನ ಇದೇ ವಿಷಯವಾಗಿ ಜೈನ ಸನ್ಯಾಸಿ ಸುಗ್ಯೇಯಸಾಗರ ಮಹಾರಾಜ್ (72) ಸರ್ಕಾರದ ನಿರ್ಧಾರವನ್ನು ಖಂಡಿಸಿ ಉಪವಾಸ ಕೈಗೊಂಡು ದೇವಾಲಯದಲ್ಲಿ ಸಾವನ್ನಪ್ಪಿದ್ದರು.
ಜಾರ್ಖಂಡ್ ನ ಪಾರಸ್‌ನಾಥ್‌ ಕೇಂದ್ರ ಜೈನ ತೀರ್ಥಯಾತ್ರೆ ಕ್ಷೇತ್ರವಾಗಿದ್ದು, ಜಾರ್ಖಂಡ್‌ ಸರ್ಕಾರ ಅದನ್ನು ಪ್ರವಾಸಿ ಕ್ಷೇತ್ರವನ್ನಾಗಿ ಮಾರ್ಪಾಡು ಮಾಡುವುದಾಗಿ ಘೋಷಿಸಿತ್ತು. ಇದರ ವಿರುದ್ಧ ಜೈನ ಸಮುದಾಯ ತಿರುಗಿಬಿದ್ದಿದೆ.
ಕೇಂದ್ರ ಸರಕಾರ ಪಾರಸ್‌ನಾಥ್ ಹಿಲ್ಸ್‌ನಲ್ಲಿ ಎಲ್ಲಾ ರೀತಿಯ ಪ್ರವಾಸೋದ್ಯಮ ಚಟುವಟಿಕೆಗಳಿಗೆ ತಡೆ ನೀಡಿದ್ದು, ಜೈನರ ಭಾವನೆಗಳನ್ನು ರಕ್ಷಿಸುವುದಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top