ಕೃಷಿ ಅಂಗಳದಿಂದ ಬದುಕಿನ ಆರಂಭ | ಸಸ್ಯಜಾತ್ರೆಗೆ ಚಾಲನೆ ನೀಡಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಭಿಯಾದರೂ ನಮ್ಮ ಚಿತ್ತ ಪಾರಂಪರಿಕ ಕೃಷಿಯತ್ತ ಹರಿಯಬೇಕಾದ ಅಗತ್ಯವಿದೆ. ನಮ್ಮೆಲ್ಲರ ಬದುಕು ಆರಂಭ ಆಗಿರುವುದೇ ಕೃಷಿ ಅಂಗಳದಿಂದ. ಆದ್ದರಿಂದ ಪಾರಂಪರಿಕ ಕೃಷಿಗೆ ಹಿಂದಿರುಗಲು ನಮ್ಮ ಮನೆ ಅಂಗಳಕ್ಕೆ ನಾವು ಹಿಂದಿರುಗುವ ಕೆಲಸ ಆಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ಸುದ್ದಿ ಮಾಹಿತಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ದ.ಕ. ಜಿಲ್ಲಾ ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್, ನಗರಸಭೆ, ವಿವಿಧ ಒಕ್ಕೂಟ ಮತ್ತು ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಕಿಲ್ಲೆ ಮೈದಾನದಲ್ಲಿ ಆರಂಭಗೊಂಡ ಸಸ್ಯಜಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಸ್ಯಕ್ಷೇತ್ರಕ್ಕಿಂದ ಮೊದಲು ಜೀವಕ್ಷೇತ್ರವು ಉಂಟಾಯಿತು. ಸ್ವಾತಂತ್ರ್ಯದ ಸಂದರ್ಭದಲ್ಲಿ ಶೇ. 85 ಗ್ರಾಮೀಣ ಮತ್ತು ಶೇ. 15 ನಗರ ಪ್ರದೇಶಗಳಿದ್ದವು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದಭದಲ್ಲಿ ಇದು ಶೇ. 60 ಮತ್ತು ಶೇ. 40ಕ್ಕೆ ಬದಲಾಯಿತು. ಸ್ವಾತಂತ್ರ್ಯ ಪಡೆದು 100 ವರ್ಷಗಳಾಗುವಾಗ ಅದು ಶೇ. 50 ಮತ್ತು ಶೇ. 50 ಆಗುವ ಸಂಭವವಿದೆ. ಈ ನಡುವೆ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ನೀರು ಕ್ರಾಂತಿಗಳ ಮೂಲಕ ಕೃಷಿ ಮತ್ತು ಪರಿಸರವನ್ನು ಉಳಿಸುವ ಕೆಲಸ ಕಾರ್ಯಗಳು ನಿರಂತರವಾಗಿ ನಡೆದಿದೆ. ಕೃಷಿಕರು ಯಾಂತ್ರಿಕೃತ ಪದ್ದತಿಗೆ ಅನಿವಾರ್ಯವಾಗಿ ಒಗ್ಗಿಕೊಂಡಿದ್ದಾರೆ. ಇದರೊಂದಿಗೆ ಆಹಾರ, ಗಾಳಿ, ನೀರು ವಿಷಪೂರಿತ ಆಗುತ್ತಿದೆ. ಇದೆಲ್ಲವನ್ನು ತಡೆಯಲು ಮತ್ತೊಮ್ಮೆನಾವು ಪಾರಂಪರಿಕ ಕೃಷಿ ಪದ್ದತಿಯತ್ತ ಸಾಗಬೇಕಾಗಿದೆ ಎಂದರು. 



































 
 

ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್, ಮಂಗಳೂರು ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಮಾತನಾಡಿದರು. 

ಸಸ್ಯಮೇಳದ ಸ್ಟಾಲ್‍ಗಳನ್ನು ಡಿಸಿಸಿ ಬ್ಯಾಂಕ್ ನಿದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಉದ್ಘಾಟಿಸಿದರು. ತಹಸೀಲ್ದಾರ್ ನಿಸರ್ಗಪ್ರಿಯ ಉಪಸ್ಥಿತರಿದ್ದರು. 

ಕೃಷಿ ಸಾಧಕರಾದ ಗಿರಿಜಾ ಎಸ್. ರೈ, ಕಸ್ತೂರಿ ಕಲಾ ರೈ, ಡಾ. ಎನ್. ಯದುಕುಮಾರ್, ಜಯಂತ ನಡುಬೈಲು ಮತ್ತು ಪೂರ್ಣಿಮಾ ಜಗದೀಶ್ ಹಾಗೂ ಸಂಜೀವಿನಿ ಒಕ್ಕೂಟದ ಸಾಧಕ ಸದಸ್ಯರನ್ನು ಸನ್ಮಾನಿಸಲಾಯಿತು. 

ಸಭಾ ಕಾರ್ಯಕ್ರಮಕ್ಕೆ ಮೊದಲು ನಗರದ ನೆಲ್ಲಿಕಟ್ಟೆಯಿಂದ ಕಿಲ್ಲೆ ಮೈದಾನದ ತನಕ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿ ಬಂದಿತು. ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ನೆಲ್ಲಿಕಟ್ಟೆ ತೆಂಗಿನ ಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು. 

ತಾಲೂಕು ಪಂಚಾಯುತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು. ಪೌರಾಯುಕ್ತ ಮಧು ಎಸ್ ಮನೋಹರ್ ವಂದಿಸಿದರು. ಸುದ್ದಿ ಮಾಹಿತಿ ಟ್ರಸ್ಟ್ ಅಧ್ಯಕ್ಷ ಡಾ. ಯು.ಪಿ. ಶಿವಾನಂದ ಪ್ರಾಸ್ತಾವಿಕ ಮಾತುಗಳನ್ನಾಡಿದರು ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ, ಉಮೇಶ್ ಮಿತ್ತಡ್ಕ, ದಾಮೋದರ ಮುಂಡೋಳೆ ವಿವಿಧ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top