ಪುತ್ತೂರು: ಡೇ-ಎನ್.ಆರ್.ಎಲ್.ಎಂ. ಯೋಜನೆಯಡಿ ಸ್ಪಂದನ ಕೃಷಿ ಉತ್ಪಾದಕ ಸಂಘದ ವತಿಯಿಂದ ನಿಡ್ಪಳ್ಳಿ ಗ್ರಾಮ ಪಂಚಾಯತ್ನ ತಂಬುತ್ತಡ್ಕದಲ್ಲಿ ಹಾಳೆತಟ್ಟೆ ಘಟಕದ ಮಾಹಿತಿ ಕಾರ್ಯಕ್ರಮ ನಡೆಯಿತು.
ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ಕಾರ್ಯಕ್ರಮ ಉದ್ಘಾಟಿಸಿ, ಮಹಿಳೆಯರು ಸ್ವ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲೀಕರಣ ಆಗಬೇಕು ಎಂದ ಅವರು, ಸದ್ರಿ ಘಟಕಕ್ಕೆ ಹಳೆ ಸಿ.ಎ. ಬ್ಯಾಂಕ್ ಕಟ್ಟಡವನ್ನು ಬಾಡಿಗೆ ರಹಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಉಪ್ಯಾಧ್ಯಕ್ಷ ವೆಂಕಟರಮಣ ಬೋರ್ಕರ್ ಅಧ್ಯಕ್ಷತೆ ವಹಿಸಿದ್ದರು. NRLM ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಶಾಂತದುರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ಚಿತ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಧ್ಯಾ ಲಕ್ಷ್ಮಿ, ಗ್ರಾಮ ಪಂಚಾಯತ್ ಸದಸ್ಯರು , ತಾಲೂಕು ವಲಯ ಮೇಲ್ವಿಚಾರಕಿ ನಮಿತಾ, ಪ್ರಗತಿಪರ ಕೃಷಿಕ ಚಂದ್ರಶೇಖರ ಪ್ರಭು, ಪಶು ಸಖಿ ತೇಜಸ್ವಿನಿ, ಮುಖ್ಯ ಪುಸ್ತಕ ಬರಹಗಾರರಾದ ಭವ್ಯ, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ ಭಾರತಿ, ಕೃಷಿ ಉದ್ಯೋಗ ಸಖಿ ಶ್ರೀಮಾ ಉಪಸ್ಥಿತರಿದ್ದರು.