ಪುತ್ತೂರು: ಪೆರ್ನಾಜೆ ಶ್ರೀ ಸೀತಾರಾಘವ ಪದವಿಪೂರ್ವ ಕಾಲೇಜಿನಲ್ಲಿ ಜ. 6ರಂದು ಶೈಕ್ಷಣಿಕೋತ್ಸವ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ರಾಷ್ಟ್ರೀಯ ಶಿಕ್ಷಣ ನೀತಿಯಡಿ ಶಾಲೆಗಳಲ್ಲಿ ಮಹತ್ತರವಾದ ಬದಲಾವಣೆಗಳು ನಡೆಯುತ್ತಿವೆ. ಪ್ರಧಾನಮಂತ್ರಿಯವರು ಶೈಕ್ಷಣಿಕ ಚಟುವಟಿಕೆಗಾಗಿ ಸುಮಾರು 5 ಕೋಟಿ ರೂ. ಅನುದಾನ ನೀಡಿದ್ದು, ಎಲ್ಲಾ ಶಾಲೆಗಳಿಗೂ ಹೊಸ ಮೆರುಗು ಬರಲಿದೆ ಎಂದ ಅವರು, ದೇವಾಲಯಗಳು ಸಂಸ್ಕೃತಿಯನ್ನು ಕಲಿಸಿದರೆ, ಶಾಲೆಗಳು ಜ್ಞಾನವನ್ನು ಕಲಿಸುವ ಕೆಲಸವನ್ನು ಮಾಡುತ್ತಿವೆ ಎಂದರು.ಕಳೆದ 57 ವರ್ಷಗಳಿಂದ ವಿದ್ಯಾಭ್ಯಾಸ ನೀಡವು ಕಾಯಕದಲ್ಲಿ ಸೀತಾರಾಘವ ಪದವಿಪೂರ್ವ ಕಾಲೇಜು ತೊಡಗಿಸಿಕೊಂಡಿದೆ. ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವ ಮೂಲಕ ಇತಿಹಾಸವನ್ನು ನಿರ್ಮಿಸಿದೆ ಎಂದರು.
ನಿವೃತ ಶಿಕ್ಷಕರಾದ ಶ್ರೀ ಕೃಷ್ಣ ಪಿ., ನಾರಾಯಣಿ ಎಸ್., ಗೋಪಾಲಕೃಷ್ಣ ಕೆ.ಆರ್., ಚಂದ್ರಮುಖಿ ಎ., ಚಿತ್ರವತಿ ಅವರನ್ನು ಸನ್ಮಾನಿಸಲಾಯಿತು. ಪದವಿಪೂರ್ವ ಕಾಲೇಜಿಗೆ ಅನುದಾನ ನೀಡಿದ ಶಾಸಕ ಸಂಜೀವ ಮಠಂದೂರು ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡವು, ಸೀತಾರಾಘವ ವಿದ್ಯಾವರ್ಧಕ ಸಂಘ ಆಡಳಿತ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೊಚ್ಚಿ, ಸೀತಾರಾಘವ ವಿದ್ಯಾವರ್ಧಕ ಸಂಘದ ಸರ್ವಅಧ್ಯಕ್ಷ ಶಂಕರನಾರಾಯಣ ಭಟ್ ಪೆರ್ನಾಜೆ, ಪ್ರೌಢಶಾಲಾ ವಿದ್ಯಾರ್ಥಿ ನಾಯಕ ಭವಿತ್, ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಪಿ., ನಿವೃತ್ತ ಪ್ರಾಚಾರ್ಯರು ಕೆ.ಆರ್. ಗೋಪಾಲಕೃಷ್ಣ, ಶೈಕ್ಷಣಿಕ ಕಾರ್ಯದರ್ಶಿ ಶಿವಶಂಕರ ಭಟ್, ನಿವೃತ ಶಿಕ್ಷಕ ಸುಬ್ರಹ್ಮಣ್ಯ ಭಟ್ ಪಟ್ಟಾಜೆ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಜಾತಾ ವರದಿ ಮಂಡಿಸಿದರು. ಕಾಲೇಜು ಪ್ರಾಚಾರ್ಯ ಮಂಟ್ಯಯ್ಯ ಅವರು ಸಂಸ್ಥೆಯ ಹಿನ್ನೋಟ ಹಾಗೂ ಕೊಡುಗೆಗಳ ಬಗ್ಗೆ ಮಾತನಾಡಿದರು. ಆಡಳಿತ ನಿರ್ದೇಶಕಿ ಸರೋಜಿನಿ ನಾಗಪಯ್ಯ ಸ್ವಾಗತಿಸಿದರು.