ಪುತ್ತೂರು: ಚಾರ್ವಾಕ ಗ್ರಾಮದ ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ. 5ರಂದು ಅಷ್ಠಬಂಧ ಬ್ರಹ್ಮಕಲಶೋತ್ಸವ ನಡೆಯಿತು.
ಬೆಳಿಗ್ಗೆ ಗಣಪತಿ ಹೋಮ, ಅಷ್ಠಬಂಧ ಲೇಪನ, ಬೆಳಿಗ್ಗೆ 11.14ಕ್ಕೆ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಂಗಪೂಜೆ, ಶ್ರೀ ಭೂತ ಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ನಾಲ್ಕಂಭ ಕ್ಷೇತ್ರದಲ್ಲಿ ಕಟ್ಟೆ ಪೂಜೆ, ಮಂತ್ರಾಕ್ಷತೆ ಹಾಗೂ ಬೆಳಂದೂರು ಲಕ್ಷ್ಮೀಪ್ರಿಯಾ ಭಜನಾ ಮಂಡಳಿಯಿಂದ ಭಜನೆ ನಡೆಯಿತು.
ಜ. 6ರ ಕಾರ್ಯಕ್ರಮ:
ಜ. 6ರಂದು ಬೆಳಿಗ್ಗೆ ಉಳ್ಳಾಕ್ಲು ಭಂಡಾರ ತೆಗೆಯಲಾಗುವುದು. ರಾತ್ರಿ 9ರಿಂದ ಮಸ್ಕಿರಿ ಕುಡ್ಲ ತಂಡದಿಂದ “ತೆಲಿಕೆ ಬಂಜಿ ನಿಲಿಕೆ” ಹಾಸ್ಯ ಗೊಂಚಿಲು ಹಾಗೂ ನೃತ್ಯ ಗಾನ ವೈಭವ ಬ್ರಹ್ಮಕಲಶ ಕಲಾ ಸಂಭ್ರಮ 2023 ನಡೆಯಲಿದೆ.