ಪುತ್ತೂರು: ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿಯನ್ನು ಕೇಂದ್ರೀಕರಿಸಿಕೊಂಡು ಪುತ್ತೂರಿನಲ್ಲಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರ ಕಚೇರಿ ಕಾರ್ಯಾರಂಭ ಮಾಡಿದೆ.ಪುತ್ತೂರು ತಾಲೂಕು ಪಂಚಾಯತ್ ಕಟ್ಟಡದ ಹಿಂಬದಿಯ ಕೊಠಡಿಯಲ್ಲಿದೆ ಇಲಾಖೆಯ ಕಚೇರಿ. ಈ ಹಿಂದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಇದೇ ಕೊಠಡಿಯಲ್ಲಿತ್ತು.
ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಮಂಜುಳಾಶ್ರೀ ಶೆಣೈ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಂಗಳೂರಿನಲ್ಲಿದ್ದ ಕಚೇರಿಯ ವಿಸ್ತರಿತ ಭಾಗ ಇದೀಗ ಪುತ್ತೂರಿನಲ್ಲಿ ಕಾರ್ಯಾರಂಭ ಮಾಡಿದೆ. ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡುವ ಹಲವು ಯೋಜನೆಗಳು ಇಲಾಖೆಯಲ್ಲಿದ್ದು, ಮೀನುಗಾರಿಕೆ ಕೃಷಿ ಮಾಡುವವರಿಕೆ, ಎಫ್ಓಪಿ ಸಂಸ್ಥಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಜ. 4ರಂದು ಸಚಿವ ಎಸ್. ಅಂಗಾರ ಅವರು ಕಚೇರಿಯನ್ನು ಉದ್ಘಾಟಿಸಿದರು. ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್, ಉಪನಿರ್ದೇಶಕಿ ಸುಶ್ಮಿತಾ ರಾವ್, ತಾ.ಪಂ. ಇಓ ನವೀನ್ ಕುಮಾರ್ ಭಂಡಾರಿ, ಸಾಜ ರಾಧಾಕೃಷ್ಣ ಆಳ್ವ, ಹರೀಶ್ ಬಿಜತ್ರೆ, ಪುತ್ತೂರ್ದ ಮುತ್ತು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮೊದಲಾದವರು ಉಪಸ್ಥಿತರಿದ್ದರು.