ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಶಿಶುಮಂದಿರ, ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಹೊನಲು ಬೆಳಕಿನ ಕ್ರೀಡೋತ್ಸವ, ವಾರ್ಷಿಕೋತ್ಸವ ಜ. 4ರಂದು ಸಂಜೆ 5.15ಕ್ಕೆ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿದೆ.
ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್. ಜಯರಾಮ ಕೆದಿಲಾಯ ಅಧ್ಯಕ್ಷತೆ ವಹಿಸುವರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೆ. ಸುಧಾಕರ ಪುತ್ತೂರಾಯ, ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್.ಆರ್., ಬಾಗಲಕೋಟೆ ಮುಧೋಳದ ಕೃಷಿಕ, ಹಿತಚಿಂತಕ ಬಾಬು ಗೌಡ ಪಾಟೀಲ್, ಬೆಳ್ಳಾರೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಜಗದೀಶ್ ಪಿ.ಎಸ್., ಪುರುಷರಕಟ್ಟೆ ಗುರುಕುಲ ಕಲಾ ಕೇಂದ್ರದ ನಿರ್ದೇಶಕಿ ಗುರುಪ್ರಿಯಾ ನಾಯಕ್ ಮುಖ್ಯಅತಿಥಿಯಾಗಿರುವರು.
ಸಂಜೆ 6.30ರಿಂದ ಕ್ರೀಡೋತ್ಸವ, ವಾರ್ಷಿಕೋತ್ಸವ 2022-23, ಸಾಂಸ್ಕೃತಿಕ ಮತ್ತು ಸಾಹಸ ಪ್ರದರ್ಶನ ಹಾಗೂ ಯಕ್ಷಗಾನ ಆಧಾರಿತ ನೃತ್ಯ ರೂಪಕ ನಡೆಯಲಿದೆ. ಅಲ್ಲದೇ, ಸಮೂಹ ನೃತ್ಯಗಳು, ಯೋಗಾಸನ, ಕರಾಟೆ, ಕೂಪಿಕಾ ಸಮತೋಲನ, ಬೆಂಕಿಯಲ್ಲಿ ಸಾಹಸಗಳು, ಕೋಲಾಟ, ಗೋಪುರ, ಮಲ್ಲಕಂಬ, ತಾಲೀಮು, ಸೈಕಲ್ ಸಾಹಸಗಳು, ದೀಪಾರತಿ ಹಾಗೂ ರಾತ್ರಿ 10.45ರಿಂದ ಐಕ್ಯಮಂತ್ರದೊAದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.