ಪುತ್ತೂರು: ಪಾಣಾಜೆ ಸುಬೋಧ ಪ್ರೌಢಶಾಲಾ ವಠಾರದಲ್ಲಿ ಜ. 11ರಂದು ನಡೆಯಲಿರುವ ಶ್ರೀದೇವಿ ಮಹಾತ್ಮೆ ಯಕ್ಷಗಾನದ ಆಮಂತ್ರಣ ಪತ್ರವನ್ನು ಶಾಲೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಜ. 11ರಂದು ಸಂಜೆ 6ರಿಂದ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಪಾಣಾಜೆ ಬಿ.ಬಿ. ಕ್ರಿಯೇಷನ್ಸ್ ನೇತೃತ್ವದಲ್ಲಿ ಯಕ್ಷಗಾನ ನಡೆಯಲಿದೆ. ರಾತ್ರಿ 8ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ. ಇದೇ ಸಂದರ್ಭ ಎಸ್ಡಿಪಿ ರೆಮಿಡೀಸ್ನ ಡಾ. ಹರಿಕೃಷ್ಣ ಪಾಣಾಜೆ, ದ.ಕ. ಸಹಕಾರಿ ಹಾಲು ಉತ್ಪಾದಕರ ನಿ. ಮಂಗಳೂರು ಇದರ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಚಲನಚಿತ್ರ ನಟ ದೀಪಕ್ ರೈ ಪಾಣಾಜೆ, ಗಂಜಿಮಠ ಆಯುರ್ ಸ್ಪರ್ಶದ ಡಾ. ಸತೀಶ್ ಶಂಕರ್ ಭರಣ್ಯ, ಇಂಡಿಯನ್ ವರ್ಲ್ಡ್ ರೆಕಾರ್ಡ್ ದಾಖಲೆಯ ಚೆಂಡೆ ವಾದಕ ಕೌಶಿಕ್ ರಾವ್ ಪುತ್ತಿಗೆ ಅವರನ್ನು ಸನ್ಮಾನಿಸಲಾಗುವುದು.
ಪಾಣಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿಶಾಲಾಕ್ಷಿ ಶೆಟ್ಟಿ ಅವರು ಆಮಂತ್ರಣ ಬಿಡುಗಡೆಗೊಳಿಸಿದರು. ಸುಬೋಧ ಪ್ರೌಢಶಾಲೆಯ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು, ವಿದ್ಯಾಶ್ರೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚಂದ್ರ ಎ.ಬಿ., ಸುಬೋಧ ಪ್ರೌಢಶಾಲೆಯ ಅಧ್ಯಾಪಕರು, ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.