ಪುತ್ತೂರು: ಬೆಳ್ತಂಗಡಿಯ ಬೋಳ್ತೆರ್ ಕೊಯ್ಯೂರು ಒಕ್ಕಲಿಗ ಗೌಡ ಸೇವಾ ಸಂಘದ 20ನೇ ವರ್ಷದ ಮಹಾಸಭೆ ಹಾಗೂ ವಾರ್ಷಿಕ ಸಮಾವೇಶ ಜ. 1ರಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಹಿಂದೂ ಧರ್ಮ ನಮ್ಮ ನಡೆ, ನುಡಿ, ಆಚಾರ, ವಿಚಾರ, ಸಂಪ್ರದಾಯ, ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡಿದ್ದು, ಯುವಕರು ಈ ಹಾದಿಯಲ್ಲಿ ಮುನ್ನಡೆಯಬೇಕು. ಯುವಕರು ಸಂಘಟನೆಯ ನೇತೃತ್ವ ವಹಿಸಿ, ಸಮುದಾಯವನ್ನು ಮುನ್ನಡೆಸುವತ್ತಲೂ ಗಮನ ಹರಿಸಬೇಕು. ನಾಯಕತ್ವ ಮೈಗೂಡಿಸಿಕೊಂಡಾಗ, ಎಲ್ಲಾ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಿಕೊಂಡು ಹೋಗಬಹುದು ಎಂದರು.
ಕೊಯ್ಯೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನವೀನ್ ಗೌಡ ವಾದ್ಯಕೋಡಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಶಾಸಕ ಸಂಜೀವ ಮಠಂದೂರು ಅವರನ್ನು ಸನ್ಮಾನಿಸಲಾಯಿತು.
ಬೋಳ್ತೇರ್ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ, ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ. ಕಾಲೇಜು ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ, ಬೋಳ್ತೇರ್ ಒಕ್ಕಲಿಗ ಗೌಡ ಸಂಘದ ನಿರ್ದೇಶಕ ನಾರಾಯಣ ಗೌಡ ದೇವಸ್ಯ, ನಿರ್ದೇಶಕರಾದ ಉಷಾ ವೆಂಕಟ್ರಮಣ ಗೌಡ, ಪಿ. ರವೀಂದ್ರನಾಥ ಗೌಡ, ಕೊಯ್ಯೂರು ಗೌಡ ಸಂಘದ ಗೌರವಾಧ್ಯಕ್ಷ ನಾರಾಯಣ ಗೌಡ ಮೈಂದಕೋಡಿ ಉಪಸ್ಥಿತರಿದ್ದರು.