ಪುತ್ತೂರು: ಪುತ್ತೂರಿನಲ್ಲಿ ಜ. ೨೨ರಂದು ನಡೆಯಲಿರುವ ಭೈರವೈಕ್ಯ ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ಜಯಂತ್ಯೋತ್ಸವ ಹಿನ್ನೆಲೆಯಲ್ಲಿ ಆಲಂಕಾರಿನಲ್ಲಿ ಸೋಮವಾರ ವಲಯವಾರು ಪೂರ್ವಸಿದ್ಧತಾ ಸಭೆ ನಡೆಯಿತು.
ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚು ಜನ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು. ಇದಕ್ಕಾಗಿ ಸಮುದಾಯದ ಪ್ರತಿ ಮನೆಗೂ ಆಮಂತ್ರಣ ಪತ್ರವನ್ನು ತಲುಪಿಸಬೇಕು ಮತ್ತು ಪ್ರತಿಯೊಬ್ಬರೂ ಸಭೆಯಲ್ಲಿ ಭಾಗವಹಿಸಬೇಕು. ಕಾರ್ಯಕ್ರಮದಲ್ಲಿ ಅದ್ದೂರಿ ಮೆರವಣಿಗೆಯನ್ನು ಆಯೋಜಿಸಿದ್ದು, ಇದರಲ್ಲೂ ಎಲ್ಲರೂ ಪಾಲ್ಗೊಳ್ಳಬೇಕು ಎಂದು ತಿಳಿಸಲಾಯಿತು.
ಸಭೆಯಲ್ಲಿ ರಾಮಣ್ಣ ದೋಳ, ಚಕ್ರಪಾಣಿ ಬಾಕಿಲ, ರಾಮಣ್ಣ ಗೌಡ ಸುರುಳಿ, ಆಶಾ ತಿಮ್ಮಪ್ಪ ಕುಂತೂರು, ತೇಜಸ್ವಿನಿ ಕಟ್ಟಪುಣಿ, ಅಶೋಕ ಪಜಡ್ಕ, ಶಿವಣ್ಣ ಗೌಡ ಕಕ್ವೆ, ದಾಮೋದರ ಗೌಡ ಕಕ್ವೆ, ಕೇಶವ ಗೌಡ ಆಲಡ್ಕ, ಆನಂದ ಗೌಡ ಪಜಡ್ಕ, ನಾರ್ಣಪ್ಪ ಗೌಡ ಕೆಮ್ಮಿಂಜೆ, ಬಾಲಕೃಷ್ಣ ಕೆಮ್ಮಿಂಜೆ, ಸುಶೀಲ ಸುರುಳಿ, ಹೇಮಚಂದ್ರ ಸುರುಳಿ, ನಾಗಪ್ಪ ಗೌಡ ಮರುವಂತಿಲ, ಸುಂದರ ಗೌಡ ಕುಂತೂರು, ಮಂಜಪ್ಪ ಗೌಡ ಕುಂತೂರು, ಜಯಂಶ್ರೀ ಪಜಡ್ಕ, ಗಾಯತ್ರಿ ಆಲಂಕಾರು, ಚರಣ್ ಹಳೆನೇರಂಕಿ, ಸುಧೀರ್ ಪಟ್ಟೆ ಕೊಲ, ಪದ್ಮಮಪ್ಪ ರಾಮಕುಂಜ, ಬಾಲಕೃಷ್ಣ ಸಂಪ್ಯಾಡಿ, ಪ್ರಕಾಶ ಬಾಕಿಲ, ದಾಮೋದರ ಗೌಡ ಕಕ್ವೆ, ಹರಿಶ್ಚಂದ್ರ ಆಲಂಕಾರು, ನಾಗಪ್ಪ ಗೌಡ, ನಾಗೇಶ ಕಣಿಯ, ರವಿಕೊಡ್ಲ ಉಪಸ್ಥಿತರಿದ್ದರು.