ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಜ.೨೨ ರಂದು ನಡೆಯಲಿರುವ ಭೈರವೈಕ್ಯ ಡಾ| ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಜಯಂತ್ಯೋತ್ಸವದ ಪೂರ್ವ ಸಿದ್ದತೆ ಹಿನ್ನೆಲೆಯಲ್ಲಿ ಸೋಮವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ತುರ್ತು ಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಿದ್ಧತೆಗಳ ಬಗ್ಗೆ ಪರಿಶೀಲಿಸಿದರು. ಮುಂದೆ ಆಗಬೇಕಾಗಿರುವ ಸಿದ್ಧತೆಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಜಂಯತ್ಯೋತ್ಸವ ಸಮಿತಿ ಸಂಚಾಲಕ ದಿನೇಶ್ ಮೆದು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಸೀತಾರಾಮ ಪೆರಿಯತ್ತೋಡಿ, ಪ್ರವೀಣ್ ಕುಂಟ್ಯಾನ, ರಾಧಾಕೃಷ್ಣ ಗೌಡ, ಪುರುಷೋತ್ತಮ ಮುಂಗ್ಲಿಮನೆ, ಗಣೇಶ್ ನೈತ್ತಾಡಿ, ಶ್ರೀಧರ್ ಗೌಡ ಕಣಜಾಲು, ಎ.ವಿ. ನಾರಾಯಣ್, ದಯಾನಂದ ಮೊದಲಾದವರು ಉಪಸ್ಥಿತರಿದ್ದರು.