ಪುತ್ತೂರು: ಜ. 2 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಶ್ರೀ ಶಾರದಾ ಭಜನಾ ಮಂದಿರದಲ್ಲಿ 86 ನೇ ವರ್ಷದ ಅರ್ಧ ಏಕಾಹ ಭಜನೆ ನಡೆಯಿತು.
ಸೋಮವಾರ ಸೂರ್ಯೋದಯದಿಂದ ಭಜನೆ ಆರಂಭವಾಗಿದ್ದು, ರಾತ್ರಿ 8 ಗಂಟೆಗೆ ಮಂಗಳಾಚರಣೆಯೊಂದಿಗೆ ಅರ್ದ ಏಕಾಹ ಭಜನೆ ಮುಕ್ತಾಯಗೊಳ್ಳಲಿದೆ. ಡಿ. 24ರಿಂದ ಭಜನೆ ಹಾಗೂ ನಗರ ಸಂಕೀರ್ತನೆ ಆರಂಭಗೊಂಡಿದ್ದು ಇಂದು ಕೊನೆಗೊಳ್ಳಲಿದೆ.

ಜ. ೧೪ರಂದು ಬಲ್ನಾಡಿಗೆ..:
ಜನವರಿ ೧೪ರಂದು ಸಂಜೆ ೬ಕ್ಕೆ ಶ್ರೀ ಶಾರದಾ ಭಜನಾ ಮಂದಿರದಿಂದ ಬಲ್ನಾಡು ಶ್ರೀ ಉಳ್ಳಾಲ್ತಿ ದೈವಸ್ಥಾನಕ್ಕೆ ಭಜನೆಯಲ್ಲಿ ತೆರಳುವ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.