ಪುತ್ತೂರು: ಟರ್ಪಾಲ್ ಹೊದಿಕೆಯಲ್ಲಿ ವಾಸವಾಗಿರುವ ಕುಟುಂಬವೊಂದಕ್ಕೆ ನೆರವಾಗುವ ದೃಷ್ಟಿಯಿಂದ ಪುತ್ತೂರು ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಹಾಗೂ ನೊಂದವರ ಬಾಳಿಗೆ ಬೆಳಕು, ತುಳುನಾಡ ಪೊರ್ಲು ಗೊಂಬೆ ಬಳಗ ಕುಪ್ಪೆಪದವು ಆಶ್ರಯದಲ್ಲಿ ಮೂಲ್ಕಿಯ ಅರಸು ಕಂಬಳದಲ್ಲಿ ಭವತಿ ಭಿಕ್ಷಾಂದೇಹಿ ಕಾರ್ಯಕ್ರಮ ನಡೆಸಲಾಯಿತು.
ನಾವೂರು ಗ್ರಾಮದ ಮೈಂದಳ ಎಂಬಲ್ಲಿ ಕುಟುಂಬವೊಂದು ಟರ್ಪಾಲ್ ಹೊದಿಕೆಯಲ್ಲಿ ಜೀವನ ನಿರ್ವಹಿಸುತ್ತಿದೆ. ಇಬ್ಬರು ಪುಟ್ಟ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ತಮ್ಮ ಜೀವನವನ್ನು ನಿರ್ವಹಿಸಿಕೊಂಡು ಹೋಗಬೇಕಾದ ಜವಾಬ್ದಾರಿ ರೇವತಿ ಪೂಜಾರಿ ಅವರದ್ದು. ಒಂದೆಡೆ ಕಲಿಕೆಯ ತುಡಿತ, ಇನ್ನೊಂದೆಡೆ ಕುಳಿತುಕೊಳ್ಳಲು ಬೆಚ್ಚನೆಯ ಸೂರು ಅವರ ಕನಸು. ಇದನ್ನು ನೆರವೇರಿಸುವ ನಿಟ್ಟಿನಲ್ಲಿ ಮೂಲ್ಕಿ ಅರಸು ಕಂಬಳದಲ್ಲಿ ಭವತಿ ಭಿಕ್ಷಾಂದೇಹಿ ಯೋಜನೆಯಡಿ ಸಹಾಯಧನ ಸಂಗ್ರಹಿಸಲಾಯಿತು.
ಇದೇ ಸಂದರ್ಭ ಮೂಲ್ಕಿ ಅರಸನ್ನು ಭೇಟಿಯಾಗಿ, ನೆರವು ಯಾಚಿಸಲಾಯಿತು.