ನಾಳೆಯಿಂದ ವೀರಮಂಗಲ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ

ಪುತ್ತೂರು: ವೀರಮಂಗಲ ಶಾಲಾ ವಾರ್ಷಿಕೋತ್ಸವ ಡಿ. 31 ರಂದು ಶಾಲಾ ಆವರಣದಲ್ಲಿ  ನಡೆಯಲಿದೆ.  60 ವರ್ಷಗಳನ್ನು  ಪೂರೈಸಿದ  ಗ್ರಾಮೀಣ ಪ್ರದೇಶದ  ಕುಮಾರನದಿಯ ತಟದಲ್ಲಿರುವ ಈ  ಶಾಲೆಯಲ್ಲಿ 155 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮಾದರಿ ಶಾಲೆಯಾಗಿ ಮೂಡಿಬಂದಿದೆ.

ಶಾಸಕ ಸಂಜೀವ ಮಠಂದೂರು ಅವರು ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಶಾಂತಿಗೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಅಧ್ಯಕ್ಷತೆ ವಹಿಸುವರು.ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ್, ವೀರಮಂಗಲ ದೇವಸ್ಥಾನದ ಆಡಳಿತ ಮೊಕ್ತೇಸರ ಶಿವರಾಮ ಭಟ್ ಬಾವ, ವೀರಮಂಗಲ ಜುಮ್ಮಾ ಮಸೀದಿ ಅಧ್ಯಕ್ಷ ರಝಾಕ್ ವಿ.ಎಸ್. ಅತಿಥಿಗಳಾಗಿರುವರು.

ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಾದ ಯಜ್ಣ ಇವರಿಗೆ ಗೌರವಾರ್ಪಣೆ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಂದ ವೈವಿಧ್ಯಮಯ ನೃತ್ಯ, ಭಾರತೀಯ ಸಂಸ್ಕೃತಿ ಬಿಂಭಿಸುವ ಏಕ್ ಭಾರತ್ ಶ್ರೇಷ್ಠ ಭಾರತ್ ಸಂಸ್ಕೃತಿಗಳ ಅನಾವರಣಗೊಳ್ಳಲಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.































 
 

ಬೆಳಗ್ಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಶಾಂತಿಗೋಡು ಗ್ರಾಮ ಪಂಚಾಯತ್  ಉಪಾಧ್ಯಕ್ಷ ಸುಧಾಕರ ಕುಲಾಲ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಎಸ್ ಡಿ ಎಂ ಸಿ ಅಧ್ಯಕ್ಷೆ  ಅನುಪಮ  ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾ.ಪಂ ಸದಸ್ಯ ಬಾಬು ಶೆಟ್ಟಿ ಬಹುಮಾನ  ವಿತರಣೆ  ಮಾಡಲಿದ್ದಾರೆ. ಗ್ರಾಮ  ಪಂಚಾಯಿತಿ  ಸದಸ್ಯರಾದ ಪದ್ಮಾವತಿ,  ವಸಂತಿ,  ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಸಮನ್ವಯಾಧಿಕಾರಿ ನವೀನ್ ವೇಗಸ್,  ಸಿ.ಆರ್.ಪಿ ಪರಮೇಶ್ವರಿ, ಶಾಲಾ ಮುಖ್ಯಗುರು  ತಾರಾನಾಥ ಸವಣೂರು, ಎಸ್ ಡಿ ಎಂ ಸಿ ಅಧ್ಯಕ್ಷೆಅನುಪಮ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಾಬಲ ರೈ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಆನಂದ ಗೌಡ ಗುತ್ತು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ಶಾಸಕರಾದಿಯಾಗಿ ಕೊಡುಗೆಗಳ ಮಹಾಪೂರ:

ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣವಾದ  ಸುಂದರವಾದ ಸುಜ್ಞಾನ ಸಭಾಂಗಣಕ್ಕೆ 5 ಲಕ್ಷ ರೂ.ಹಾಗೂ  ನೂತನ ಕೊಠಡಿಗೆ 5 ಲಕ್ಷ ರೂ. ಧನಸಹಾಯ ನೀಡಿದ್ದಾರೆ. 2022-23ನೇ ಸಾಲಿನಲ್ಲಿ 3 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಹಾಗೂ  ಕುಡಿಯುವ  ನೀರಿನ ಘಟಕ ಒದಗಿಸಿಕೊಟ್ಟಿದ್ದಾರೆ.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ವಾರ್ಷಿಕೋತ್ಸವ ಸಮಿತಿ,  ಹಿರಿಯ ವಿದ್ಯಾರ್ಥಿ  ಸಂಘ,  ಪೋಷಕರು ಹಾಗೂ ಊರವರ  ನೆರವಿನಿಂದ ವಾರ್ಷಿಕೋತ್ಸವ ಸಂಭ್ರಮದ ಜೊತೆಯಲ್ಲಿ ಅಭಿವೃದ್ಧಿಯ ಕೆಲಸಗಳಿಗೆ ಶಾಲಾ ಆಡಳಿತ  ವ್ಯವಸ್ಥೆಯು ಕೈ ಜೋಡಿಸಿದೆ. ನಿವೃತ್ತ ರೈಲ್ವೆ ಇಂಜಿನಿಯರ್ ಗೋಪಕುಮಾರ್ ಆನಾಜೆ ಅವರು 800 ಚದರ ಅಡಿಯ ಸ್ಮಾರ್ಟ್ ತರಗತಿ ಕೋಣೆಗೆ ಟೈಲ್ಸ್ ಖರೀದಿಸಲು ಆರ್ಥಿಕ ನೆರವು ನೀಡಿದ್ದಾರೆ. ವೀರಮಂಗಲ ಬದ್ರಿಯಾ ಜುಮ್ಮಾ ಮಸೀದಿಯ ವತಿಯಿಂದ 450 ಚದರ ಅಡಿ ಇರುವ ನಲಿಕಲಿ ತರಗತಿಗೆ ಹಾಗೂ ವಾರ್ಷಿಕೋತ್ಸವ ಸಮಿತಿಯು 450 ಚದರ ಅಡಿ ಇರುವ ಇನ್ನೊಂದು ನಲಿಕಲಿ  ತರಗತಿ ಕೋಣೆಗೆ ಟೈಲ್ಸ್ ಅಳವಡಿಸಿದೆ. ಹೈಟೆಕ್ ಶೌಚಾಲಯಕ್ಕೆ ರೋಟರಿ ಕ್ಲಬ್ ಪುತ್ತೂರು ಶೌಚಾಲಯದ  ಸಾಮಗ್ರಿಗಳನ್ನು,  ಹಾಗೂ ಸುಮಾರು 10000 ವೆಚ್ಚದ ಸಿಮೆಂಟ್ ರಿಂಗ್ ಸಾಮಗ್ರಿಗಳನ್ನು, ಗಣೇಶ್ ಸಾಲ್ಯಾನ್ ಅವರು 1000 ಲೀಟರ್ ನೀರಿನ ಟ್ಯಾಂಕ್ ನ್ನು , ಶ್ರೀ ಸುಬ್ರಹ್ಮಣ್ಯ ಕರಂಬಾರು, ಷಣ್ಮುಖ ಯುವಕ ಮಂಡಲ ಸರ್ವೆ  ಹಾಗೂ ಬಾಲಚಂದ್ರ ಬೆಂಗಳೂರು 6000 ರೂ. ವೆಚ್ಚ ಭರಿಸಿದ್ದಾರೆ. ಪೈಪ್ ಪರಿಕರಗಳನ್ನು ಉದಯ ಅವರು ನೀಡಿದ್ದಾರೆ. ಪೀಠೋಪಕರಣವನ್ನು ಶ್ರೀ ಜತ್ತಪ್ಪಗೌಡ ಬೆಂಗಳೂರು ಅವರು ನೀಡಿದ್ದಾರೆ. ಹಿರಿಯ  ವಿದ್ಯಾರ್ಥಿಗಳು 25000 ರೂ. ವೆಚ್ಚದ  ಬಯಲು ರಂಗಮಂದಿರ ನಿರ್ಮಿಸಿಕೊಟ್ಟಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top