ಊರಿಗೆ ಅರಸನಾದರೂ ತಾಯಿಗೆ ಮಗ | ತಾಯಿ ಅಂತ್ಯಕ್ರಿಯೆ ನೆರವೇರಿಸಿದ ಪ್ರಧಾನಿ ಮೋದಿ

ನವದೆಹಲಿ: ತನ್ನ ತಾಯಿ ಯಶೋದಾಬೆನ್ ಅವರ ಅಂತ್ಯಕ್ರಿಯೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ನೆರವೇರಿಸಿದರು.

ಡಿಸೆಂಬರ್ ೩೦ರ ಬೆಳಗ್ಗಿನ ಜಾವ ೩.೩೯ಕ್ಕೆ ಯಶೋದಾಬೆನ್ (೧೦೦ ವ.) ಅಹಮದಾಬಾದ್ ಯು.ಎನ್. ಮೆಹ್ಯಾ ಇನ್ ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆ್ಯಂಡ್ ರೀಸರ್ಚ್ ಸೆಂಟರಿನಲ್ಲಿ ಕೊನೆಯುಸಿರೆಳೆದರು. ಅಹಮದಾಬಾದಿನ ಗಾಂಧಿನಗರದಲ್ಲಿ ಚಿತಾಗಾರದಲ್ಲಿ ಬೆಳಿಗ್ಗೆ ಯಶೋದಾಬೆನ್ ಅವರ ಅಂತ್ಯಕ್ರಿಯೆ ನಡೆಯಿತು.

ಅಂತ್ಯಕ್ರಿಯೆಗೆ ಮುನ್ನ ಯಶೋದಾಬೆನ್ ಅವರ ಶರೀರದ ಅಂತಿಮಯಾತ್ರೆಗೆ ಪ್ರಧಾನಿ ಮೋದಿ ಅವರು ಹೆಗಲುಕೊಟ್ಟು, “ಊರಿಗೆ ಅರಸನಾದರೂ ತಾಯಿಗೆ ಮಗ” ಎನ್ನುವ ಮಾತಿಗೆ ನಿದರ್ಶನವಾಗಿ ನಿಂತರು.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top