ಪುತ್ತೂರು: ಸಾಮಾಜಿಕ, ಶೈಕ್ಷಣಿಕ ಪ್ರಗತಿಗಾಗಿ ಕೆಲಸ ನಿರ್ವಹಿಸುತ್ತಿರುವ ಸುನ್ನಿ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ಇದರ ಸದಸ್ಯತ್ವ ಅಭಿಯಾನ 2023ರ ಜನವರಿ 1ರಿಂದ 10ರವರೆಗೆ ರಾಜ್ಯಾದ್ಯಂತ ನಡೆಯಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಹೇಳಿದರು.
ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಸ್ಸೆಸ್ಸೆಫ್, ಲಕ್ಷಾಂತರ ವಿದ್ಯಾರ್ಥಿಗಳನ್ನು ನಾಡಿಗೆ ಪರಿಚಯಿಸಿದೆ. ಹಾದಿ ತಪ್ಪುತ್ತಿರುವ ವಿದ್ಯಾರ್ಥಿ ಸಮೂಹಕ್ಕೆ ಧಾರ್ಮಿಕತೆ, ನೈತಿಕತೆ ಹಾಗೂ ಆಧ್ಯಾತ್ಮಿಕತೆಯನ್ನು ತುಂಬಿ, ಸಮಾಜದ ಸತ್ರ್ಪಜೆಗಳನ್ನಾಗಿ ಮಾಡಲು ಎಸ್ಸೆಸ್ಸೆಫ್ ಶ್ರಮಿಸುತ್ತಿದೆ. ಐದು ದಶಕಗಳ ಹಿಂದೆ ದೇಶಾದ್ಯಂತ ಆರಂಭಗೊಂಡ ೀ ಸಂಸ್ಥೆಗೆ ಇದೀಗ ಸುವರ್ಣ ಮಹೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಕರ್ನಾಟಕ ಉಲಮಾ ಒಕ್ಕೂಟದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನೀ ವಿದ್ಯಾರ್ಥಿ ಒಕ್ಕೂಟವಾದ ಎಸ್ಸೆಸ್ಸೆಫ್, ಯುವಜನ ಒಕ್ಕೂಟವಾದ ಎಸ್.ವೈ.ಎಸ್., ಕರ್ನಾಟಕ ಮುಸ್ಲಿಂ ಜಮಾಅತ್ ಮೂರು ಸಂಘಟನೆಗಳು ಸಂಯುಕ್ತವಾಗಿ ಸದಸ್ಯತ್ವ ಅಭಿಯಾನ ನಡೆಸಲಿದೆ. ವ್ಯರ್ಥವಾಗದಿರಲಿ ಯೌವ್ವನ ಎಂಬ ಧ್ಯೇಯವಾಕ್ಯದಡಿ 12ರಿಂದ 32 ವಯಸ್ಸಿನವರೆಗಿನ ಯುವಕರಿಗೆ ಸಂಘಟನೆಯ ತತ್ವ, ಸಿದ್ಧಾಂತಗಳಲ್ಲಿ ಬದ್ಧರಾದ ವಿದ್ಯಾರ್ಥಿಗಳು, ಯುವಕರು ಸಂಘಟನೆಯ ಸದಸ್ಯತ್ವ ಅಭಿಯಾನದಲ್ಲಿ ಕೈಜೋಡಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಈಸ್ಟ್ ಅಧ್ಯಕ್ಷ ಎಫ್.ಎಚ್. ಮುಹಮ್ಮದ್ ಮಿಸ್ಸಾಹಿ, ಪ್ರ. ಕಾರ್ಯದರ್ಶಿ ಶಫೀಕ್ ತಿಂಗಳಾಡಿ, ಕೋಶಾಧಿಕಾರಿ ಮುಹಮ್ಮದ್ ಇಕ್ಬಾಲ್ ಮಾಚಾರ್ ಉಪಸ್ಥಿತರಿದ್ದರು.