ಪುತ್ತೂರು: ಯುವ ಒಕ್ಕಲಿಗ ಗೌಡ ಸೇವಾ ಸಂಘ ಪ್ರಾಯೋಜಕತ್ವದ ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಪುತ್ತೂರು ಇದರ ಸ್ವಂತ ಕಟ್ಟಡದಲ್ಲಿ ನೂತನ ಕಚೇರಿಯ ಉದ್ಘಾಟನಾ ಸಮಾರಂಭ ಹಾಗೂ ಸಭಾ ಕಾರ್ಯಕ್ರಮ ಜ. 1ರಂದು ಬೆಳಿಗ್ಗೆ 9 ಗಂಟೆಗೆ ನೆಲ್ಲಿಕಟ್ಟೆ ಒಕ್ಕಲಿಗ ಸೌಧದಲ್ಲಿ ನಡೆಯಲಿದೆ.
ಮಂಗಳೂರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಕಚೇರಿ ಉದ್ಘಾಟಿಸಿ, ಆಶೀರ್ಚನ ನೀಡುವರು. ಪುತ್ತೂರು ಒಕ್ಕಲಿಗ ಸ್ವ-ಸಹಾಯ ಸಂಘದ ಅಧ್ಯಕ್ಷ ಡಿ.ವಿ. ಮನೋಹರ ಅಧ್ಯಕ್ಷತೆ ವಹಿಸುವರು. ಶಾಸಕ ಸಂಜೀವ ಮಠಂದೂರು ವಿವಾಹ ವೇದಿಕೆಯ ಕಚೇರಿ ಉದ್ಘಾಟಿಸುವರು.
ಬೆಂಗಳೂರು ಒಕ್ಕಲಿಗರ ಸಂಘದ ಉಪಾಧ್ಯಕ್ಷ ರೇಣಿಕಾ ಪ್ರಸಾದ್ ಕೆ.ವಿ. ಅಧ್ಯಕ್ಷರ ಕೊಠಡಿಯನ್ನು ಉದ್ಘಾಟಿಸುವರು. ಪುತ್ತೂರು ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ್, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಉಪಸ್ಥಿತರಿರುವರು.ಬೆಳಿಗ್ಗೆ 7.30ಕ್ಕೆ ಗಣಹೋಮ, 10ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಭೋಜನದ ವ್ಯವಸ್ಥೆಇದೆ ಎಂದು ಪ್ರಕಟಣೆ ತಿಳಿಸಿದೆ.