ಟೆಲ್ಅವೀವ್: ಇಸ್ರೇಲ್ನ ನೂತನ ಪ್ರಧಾನಿಯಾಗಿ ಬೆಂಜಮಿನ್ ನೆಥನ್ಯಾಹು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇದರೊಂದಿಗೆ ಇಸ್ರೇಲ್ ಇತಿಹಾಸದಲ್ಲೇ ಕಟ್ಟಾ ಬಲಪಂಥೀಯ ಸರಕಾರದ ನೇತೃತ್ವವನ್ನು 73 ವರ್ಷದ ನೆಥನ್ಯಾಹು ವಹಿಸಿದಂತಾಗಿದೆ.
1996ರಿಂದ 1999ರ ನಡುವಿನ ಅವಧಿ ಹಾಗೂ 2009ರಿಂದ 2021ರ ಅವಧಿಯಲ್ಲಿ ಇಸ್ರೇಲ್ ಪ್ರಧಾನಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ.
ಗುರುವಾರ ಇಸ್ರೇಲ್ ನ ಸಂಸತ್ತು ನೆಥನ್ಯಾಹು ಅವರ ಸರಕಾರದ ಪರ ವಿಶ್ವಾಸ ವ್ಯಕ್ತಪಡಿಸಿದ ಬಳಿಕ ನೆಥನ್ಯಾಹು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
120 ಸದಸ್ಯ ಬಲದ ಸಂಸತ್ತಿನಲ್ಲಿ 63 ಸದಸ್ಯರು ನೆಥನ್ಯಾಹು ಸರಕಾರದ ಪರ ಕೈ ಎತ್ತಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.