ದ್ವೇಷ ಭಾಷಣ ಮಾಡಿದ ಆರೋಪ
ಶಿವಮೊಗ್ಗ: ನಗರದಲ್ಲಿ ಭಾನುವಾರ ನಡೆದ ಹಿಂದೂ ಜಾಗರಣ ವೇದಿಕೆಯ ಸಮಾವೇಶದಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಂಸದೆಯ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್.ಸುಂದರೇಶ್ ದೂರು ಸಲ್ಲಿಸಿದ್ದಾರೆ.
ಸಾಧ್ವಿ ಪ್ರಜ್ಞಾ ಅವರ ಭಾಷಣ ಶಸ್ತ್ರಾಸ್ತ್ರಗಳ ಬಳಕೆಗೆ ಮುಕ್ತ ಕರೆಯಾಗಿತ್ತು, ಇದು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಗುಂಪು ಹಿಂಸಾಚಾರ ಮತ್ತು ಹಲ್ಲೆಗೆ ಕಾರಣವಾಗಬಹುದು. ಭಾಷಣವು ಅಸಹಿಷ್ಣುತೆ, ದ್ವೇಷ ಮತ್ತು ನಿರ್ದಿಷ್ಟ ಸಮುದಾಯದ ವಿರುದ್ಧ ಹಿಂಸಾಚಾರದ ಸಂಭಾವ್ಯ ಪರಿಣಾಮವನ್ನು ಹೊಂದಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಲವ್ ಜಿಹಾದ್ ತಡೆಯಲು ಮಹಿಳೆಯರು ಚಾಕುಗಳನ್ನು ಹರಿತ ಮಾಡಿಟ್ಟುಕೊಳ್ಳಬೇಕೆಂದು ಪ್ರಜ್ಞಾಸಿಂಗ್ ಠಾಕೂರ್ ಹೇಳಿದ್ದರು. ಮನೆಯಲ್ಲಿ ಆಯುಧಗಳನ್ನು ಇಟ್ಟುಕೊಳ್ಳಬೇಕು, ಅವುಗಳು ಲಭ್ಯವಿಲ್ಲದಿದ್ದರೆ ತರಕಾರಿಗಳನ್ನು ಕತ್ತರಿಸಲು ಬಳಸುವ ಚಾಕುಗಳನ್ನು ಶತ್ರುಗಳ ತಲೆಯನ್ನು ಕತ್ತರಿಸಲು ಬಳಸಬೇಕು ಎಂದು ಹೇಳಿದ್ದರು.
ಸುಂದರೇಶ್ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ. ಕೆ. ತಿಳಿಸಿದ್ದಾರೆ.