ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಒಂದು ಮಂಡಲ ರಂಗಪೂಜೆಯು ಮಂಗಳವಾರ ರಾತ್ರಿ ನಡೆದ ದೊಡ್ಡ ರಂಗಪೂಜೆಯೊಂದಿಗೆ ಸಮಾಪನಗೊಂಡಿತು. ಬುಧವಾರ ಹಾಗೂ ಗುರುವಾರ ದೇವಸ್ಥಾನದ ವಾರ್ಷಿಕ ಕಿರುಷಷ್ಠಿ ಉತ್ಸವ ನಡೆಯಲಿದೆ.
ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ ನಡೆದು, ಮಧ್ಯಾಹ್ನ ಉಗ್ರಾಣ ಪೂಜೆ, ಮಹಾಪೂಜೆ ನೆರವೇರಿತು. ಸಂಜೆ ಗಣೇಶ ಪ್ರಾರ್ಥನೆ, ದೀಪಾರಾಧನೆ ನಡೆದು ಬಳಿಕ ದೊಡ್ಡರಂಗಪೂಜೆ ಜರಗಿತು. ಕಳೆದ ೪೮ ದಿನಗಳಿಂದ ನಿರಂತರವಾಗಿ ರಂಗಪೂಜೆ ಜರಗಿತ್ತು. ವಿವಿಧ ಭಜನಾ ತಂಡಗಳು ಭಜನಾ ಸೇವೆ ನೆರವೇರಿಸಿಕೊಟ್ಟಿತು. ಕೊನೆ ದಿನವಾದ ಮಂಗಳವಾರ ನೈವೇದ್ಯ ಸಮರ್ಪಣೆಯೊಂದಿಗೆ ದೊಡ್ಡರಂಗಪೂಜೆಯು ಜರಗಿತು.
