ಹಿಂದೂ ಭಜಕರ ವಿರುದ್ಧ ಅವಹೇಳನಕಾರಿ ಪೋಸ್ಟ್: ಅರಣ್ಯಾಧಿಕಾರಿ ಅಮಾನತಿಗೆ ಆಗ್ರಹ

ಪುತ್ತೂರು: ಹಿಂದೂ ಭಜಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಬರೆದಿದ್ದ ಅರಣ್ಯ ಇಲಾಖೆ ಅಧಿಕಾರಿಯನ್ನು ಬುಧವಾರದೊಳಗೆ ಅಮಾನತು ಮಾಡುವಂತೆ ಭಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ್ ಮುರಳೀಕೃಷ್ಣ ಹಸಂತಡ್ಕ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪ್ರವಾದಿ ಬಗ್ಗೆ ಪೋಸ್ಟ್ ಮಾಡಿದ ಹಿಂದೂ ಯುವಕನನ್ನು ಪೋಲೀಸರು ತಕ್ಷಣ ಬಂಧಿಸಿದ್ದಾರೆ. ಆದರೆ ಹಿಂದೂಗಳ ಆಚರಣೆಯ ಬಗ್ಗೆ ಬರೆದ ಅಧಿಕಾರಿಯ ಮೇಲೆ ಕ್ರಮಕ್ಕೆ ಮೀನಾಮೇಷ ಎಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಿಂದೂ ಭಜಕರ ಅವಹೇಳನಕಾರಿಯಾಗಿ ಬರೆದ ಅಧಿಕಾರಿಯನ್ನು ಸಮರ್ಥಿಸುವ ಕೆಲಸ ಆಗುತ್ತಿದೆ. ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್, ಯು.ಟಿ.ಖಾದರ್ ಅಧಿವೇಶನದಲ್ಲಿ ಅಧಿಕಾರಿಯ ಪರ ಮಾತನಾಡುತ್ತಾರೆ. ಹಿಂದೂಗಳ ಆಚರಣೆ ಬಗ್ಗೆ ಬರೆದವನ ಪರ ವಹಿಸುವ ಈ ಮುಖಂಡರು ಹಿಂದೂ ಯುವಕನ ಪರ ಯಾಕೆ ಮಾತಾಡಿಲ್ಲ ಎಂದು ಆರೋಪಿಸಿದ ಅವರು, ಅರಣ್ಯ ಇಲಾಖೆಯ ಅಧಿಕಾರಿಯನ್ನು ಅಮಾನತು ಮಾಡದೇ ಹೋದಲ್ಲಿ ಪ್ರತಿಭಟನೆಯನ್ನು ಹಂತ ಹಂತವಾಗಿ ಮಾಡಲಾಗುವುದು ಎಂದರು.



































 
 

10 ಸಾವಿರ ಭಜಕರನ್ನು ಸೇರಿಸಿ ರಸ್ತೆ ತಡೆ ನಡೆಸಲಾಗುವುದು, ಅರಣ್ಯ ಇಲಾಖೆಯ ಎಲ್ಲಾ ಕಛೇರಿ ಮುಂದೆಯೂ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top