ಪುತ್ತೂರು: ೧೨ನೇ ವರ್ಷದ ಅಮರ್ ಅಕ್ಬರ್ ಅಂತೋನಿ ಸೌಹಾರ್ಧ ಕ್ರಿಕೆಟ್ ಪಂದ್ಯಾಟವು ಡಿ. ೨೦ರಿಂದ ೨೬ರತನಕ ೬ ದಿನಗಳ ಕಾಲ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಿತು. ಪಂದ್ಯಾಟದ ರೋಲಿಂಗ್ ಟ್ರೋಫಿಯನ್ನು ವೈ.ಎಸ್.ವಿ. ವಾಮದಪದವು ಪಡೆದುಕೊಳ್ಳುವ ಮೂಲಕ ವಿನ್ನರ್ಸ್ ಆಗಿ ಮೂಡಿಬಂದಿತು. ನಮೋ ಬ್ರದರ್ಸ್ ಬೋಳಂಗಡಿ ರನ್ನರ್ಸ್ ಆಗಿ ಗಮನ ಸೆಳೆಯಿತು.
ಕಿಲ್ಲೆ ಕಪ್ ವಿನ್ನರ್ಸ್ ಆಗಿ ಫೈಟರ್ಸ್ ತೋಡಾರ್ ಪ್ರಥಮ, ಜಾನ್ ಜಿಗ್ಗರ್ ಸುಳ್ಯ ದ್ವಿತೀಯ ಸ್ಥಾನ ಗಳಿಸಿತು. ಗ್ರಾಮ ಕಪ್ನ ವಿನ್ನರ್ಸ್ ಆಗಿ ಎಮಿರೇಟ್ಸ್ ನೆಲ್ಯಾಡಿ ಪಡೆದುಕೊಂಡಿತು. ಕರಾವಳಿ ಬನ್ನೂರು ರನ್ನರ್ ಅಪ್ ಆಗಿ ಹೊರಹೊಮ್ಮಿತು.
ಸಿಟಿ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಪುತ್ತೂರು, ಟೆನ್ ಗೈಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಅಬುದಾಬಿ, ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ಮತ್ತು ಸೌದಿ ಆರೇಬಿಯಾ ಇವುಗಳ ಸಹಯೋಗದಲ್ಲಿ ಪಂದ್ಯಾಟ ನಡೆಯಿತು. ಯುವ ಸಮುದಾಯದಲ್ಲಿ ಶಾಂತಿ ಮತ್ತು ಸೌಹಾರ್ಧತೆ ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗುತ್ತಿದೆ.
ಕ್ರಿಕೆಟ್ ಪಂದ್ಯಾಟವು ೬ ದಿನಗಳ ಕಾಲ ಅಹೋರಾತ್ರಿ ನಡೆದಿದ್ದು, ಸುಮಾರು ೧೬೦ ತಂಡಗಳು ಭಾಗವಹಿಸಿತು. ಅಮರ್ ಅಕ್ಬರ್ ಅಂತೋನಿ' ಟ್ರೋಫಿ ಪಂದ್ಯಾಟದ ಜೊತೆಗೆ ಈ ಬಾರಿ ವಿಶೇಷವಾಗಿ ದಿ. ಗಣಪತಿ ನಾಯಕ್ ಅವರ ಸ್ಮರಣಾರ್ಥ ೧೪ರಿಂದ ೧೬ ವರ್ಷದ ಬಾಲಕರಿಗೆ
ಸ್ಟಿಚ್ ಬಾಲ್’ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಇದರೊಂದಿಗೆ ಎನ್.ಎಸ್. ಕಿಲ್ಲೆ ಅವರ ಸ್ಮರಣಾರ್ಥ ಕಿಲ್ಲೆ ಕಪ್' ಪಂದ್ಯಾಟವೂ ನಡೆಯಿತು. ಹಳ್ಳಿಯ ಯುವಕರಿಗೆ ಪ್ರೇರಣೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ
ಹಳ್ಳಿ ಹುಡುಗ್ರು ಪ್ಯಾಟೆ ಕಪ್’ ಮತ್ತು ವಿವಿಧ ಇಲಾಖೆಗಳ ಪಂದ್ಯಾಟ ಗಮನ ಸೆಳೆಯಿತು.
ಸಮಾರೋಪ ಸಮಾರಂಭದಲ್ಲಿ ಪುತ್ತೂರಿನ 25 ಮಂದಿ ವಿದ್ಯುತ್ ಲೈನ್ಮೆನ್ಗಳನ್ನು ಗುರುತಿಸಿ ಗೌರವಿಸಲಾಯಿತು.