ಬೆಂಗಳೂರು ವಿವಿ ಬಿಕಾಂ ಪಠ್ಯದಲ್ಲಿ ಅಪ್ಪು ಪಾಠ

ಪುನೀತ್‌ ರಾಜ್‌ಕುಮಾರ್‌ ಕುರಿತಾದ ಅಧ್ಯಾಯ ಪಠ್ಯ ಪುಸ್ತಕಕ್ಕೆ ಸೇರ್ಪಡೆ

ಬೆಂಗಳೂರು: ಕಳೆದ ವರ್ಷ ನಿಧನರಾದ ಕನ್ನಡ ಚಿತ್ರರಂಗದ ಕಣ್ಮಣಿ ಪುನೀತ್‌ ರಾಜಕುಮಾರ್ ಜೀವನಗಾಥೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ರಾಜ್ಯ ಸರ್ಕಾರ ಸರ್ಕಾರ ಸೇರಿಸಿದೆ.
ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದ ನೀನೇ ರಾಜಕುಮಾರ ಕೃತಿಯ ಒಂದು ಅಧ್ಯಾಯ ‘ಲೋಹಿತ ಎಂಬ ಮರಿಮುದ್ದʼ ಎಂಬ ಆಯ್ದ ಭಾಗವನ್ನು ಬಿಕಾಂ 3ನೇ ಸೆಮಿಸ್ಟರ್‌ನಲ್ಲಿ ಪಠ್ಯವಾಗಿ ಸೇರ್ಪಡೆಗೊಳಿಸಲಾಗಿದೆ.
ನಟನೆ ಜೊತೆಗೆ ಸರಳತೆ, ಸಮಾಜಮುಖಿ ಕಾರ್ಯಗಳಿಂದ ಸ್ಫೂರ್ತಿಯಾಗಿದ್ದ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಪಠ್ಯದಲ್ಲಿ ಸೇರಿಸಬೇಕೆಂದು ಅಪ್ಪು ಅಭಿಮಾನಿಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು. ಶಿಕ್ಷಣ ಸಚಿವರಿಗೂ ಮನವಿ ಪತ್ರ ಸಲ್ಲಿಸಿದ್ದರು. ಅದರಂತೆ ಇದೀಗ ಅವರ ಬೇಡಿಕೆ ಈಡೇರಿದ್ದು, ಪುನೀತ್ ಜೀವನಗಾಥೆಯನ್ನು ಪಠ್ಯ ಪುಸ್ತಕದಲ್ಲಿ ಸೇರ್ಪಡೆ ಮಾಡಲಾಗಿದೆ.
ಈ ಕುರಿತು ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಇದು ಸರ್ಕಾರ ಕಲಾವಿದರಿಗೆ ಕೊಡುವ ಗೌರವದ ಸಂಕೇತ ಎಂದು ಹೇಳಿಕೊಂಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top