ಸುಳ್ಯ: ಡಾ. ಕುರುಂಜಿ ವೆಂಕಟರಮಣ ಗೌಡ ಅವರ ೯೪ನೇ ಹುಟ್ಟುಹಬ್ಬ ಆಚರಣೆಯು ಡಿ. ೨೬ರಂದು ಸುಳ್ಯ ಕೆವಿಜಿ ಕ್ಯಾಂಪಸ್‌ನಲ್ಲಿ ನಡೆಯಿತು.



ಸುಳ್ಯ ಕೆಜಿವಿ ಕ್ಯಾಂಪಸ್‌ನಲ್ಲಿರುವ ಡಾ. ಕುರುಂಜಿ ವೆಂಕಟರಮಣ ಗೌಡ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅವರಿಗೆ ಗೌರವ ಸೂಚಿಸಲಾಯಿತು. ಬಳಿಕ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಜರಗಿತು.

ಸುಳ್ಯದ ಕರ್ಮ ಯೋಗಿ ಎಂದೇ ಕರೆಯಲ್ಪಡುವ ಡಾ. ಕುರುಂಜಿ ವೆಂಕಟರಮಣ ಗೌಡ ಅವರು, ನವ ಸುಳ್ಯದ ನಿರ್ಮಾತೃರೂ ಹೌದು. ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ವಿದ್ಯಾಲಯವನ್ನು ಹುಟ್ಟುಹಾಕಿ, ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು. ಸುಳ್ಯ ಎಓಎಲ್‌ಇಯ ಸ್ಥಾಪಕಾಧ್ಯಕ್ಷರಾಗಿಯೂ ಗುರುತಿಸಿಕೊಂಡಿದ್ದರು. ಅವರ ೯೪ನೇ ಹುಟ್ಟುಹಬ್ಬವನ್ನು ಸುಳ್ಯದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.