ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಂದದ ಆಧಾರದ ಮೇಲೆ 1438 ಕಲೆಕ್ಷನ್ ಫೆಸಿಲಿಟೇಟರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ.
SBI ನಿವೃತ್ತ ಅಧಿಕಾರಿಗಳು/ಸಿಬ್ಬಂದಿ ಮತ್ತು SBIಯ ಹಿಂದಿನ ಅಸೋಸಿಯೇಟ್ಸ್ ಬ್ಯಾಂಕ್ಗಳ ಸಿಬ್ಬಂದಿ (e-ABs) ಒಪ್ಪಂದದ ಆಧಾರದ ಮೇಲೆ ಕಲೆಕ್ಷನ್ ಫೆಸಿಲಿಟೇಟರ್ಗಳ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನಿವೃತ್ತ ಅಧಿಕಾರಿಗಳು, ಸಿಬ್ಬಂದಿಯನ್ನು CPC/ಪ್ರಾದೇಶಿಕ ಕಚೇರಿ/ AO (ಆಡಳಿತಾತ್ಮಕ ಕಚೇರಿ)/ ATC (ಆಸ್ತಿಗಳ ಟ್ರ್ಯಾಕಿಂಗ್ ಕೇಂದ್ರ) ಅಥವಾ LHO ನಿರ್ಧರಿಸಿದಂತೆ ಯಾವುದೇ ಇತರ ಕಚೇರಿ ಸ್ಥಳಗಳು/ಸಂಸ್ಥೆಗಳಲ್ಲಿ ನಿಯೋಜಿಸಲಾಗುವುದು.
ಅಭ್ಯರ್ಥಿಗಳು ಜನವರಿ 10, 2023ರ ವರೆಗೆ ವೆಬ್ಸೈಟ್ sbi.co.in ನಲ್ಲಿ ಅರ್ಜಿ ಸಲ್ಲಿಸಬಹುದು.
ಎಸ್ಬಿಐ ಅಥವಾ ಬ್ಯಾಂಕ್ನ ಇತರ ಸಹವರ್ತಿ ಸಂಸ್ಥೆಗಳ ನಿವೃತ್ತ ಅಧಿಕಾರಿ ಅಥವಾ ಸಿಬ್ಬಂದಿ (63 ವರ್ಷಕ್ಕಿಂತ ಮೇಲ್ಪಟ್ಟಿರದ) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಸೇವೆಯ(ಅನುಭವ) ದಾಖಲೆಯನ್ನು ಹೊಂದಿರಬೇಕು. ಅವರಿಗೆ ನೀಡಲಾದ ಉದ್ಯೋಗದಲ್ಲಿ ಅವರು ಜ್ಞಾನ ಮತ್ತು ಪರಿಣತಿಯನ್ನು ಹೊಂದಿರಬೇಕು.
ಸ್ಟೇಟ್ ಬ್ಯಾಂಕ್ನಲ್ಲಿ ನಿವೃತ್ತರಿಗೆ 1438 ಹುದ್ದೆಗಳು
