ನಟ ರಾಜ್ಕುಮಾರ್ ಕುಟುಂಬದ ಬಗ್ಗೆ ಮಾತನಾಡಿದ ಆರೋಪ
ಬೆಂಗಳೂರು: ವರನಟ ಡಾ. ರಾಜ್ಕುಮಾರ್ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ ಎಂದು ಆರೋಪಿಸಿ ಪುನೀತ್ ಕೆರೆಹಳ್ಳಿಗೆ ಕನ್ನಡಪರ ಹೋರಾಟಗಾರರು ಧರ್ಮದೇಟು ನೀಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಚಾಮರಾಜಪೇಟೆಯಲ್ಲಿ ಈ ಘಟನೆ ನಡೆದಿದ್ದು, ರಾಜ್ಕುಮಾರ್ ಫ್ಯಾಮಿಲಿ ಬಗ್ಗೆ ಹಗುರವಾಗಿ ಮಾತನಾಡಿದ್ದೀಯಾ? ನೀನು ಕ್ಷಮೆ ಕೇಳಬೇಕು ಎಂದು ತಂಡ ಹೇಳಿ ಬಳಿಕ ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ.
ಶಿವಕುಮಾರ್ ನಾಯ್ಕ್ ಬಣ ಹಲ್ಲೆ ನಡೆಸಿದೆ ಎಂಬ ಆರೋಪಿಸಲಾಗಿದೆ. ಈ ಘಟನೆಗೂ ಮುನ್ನ ಪುನೀತ್ ಕೆರೆಹಳ್ಳಿಗೆ ಕರೆ ಮಾಡಿ ಕ್ಷಮೆ ಕೇಳುವಂತೆ ಹೇಳಲಾಗಿತ್ತು. ಆದರೆ ಕ್ಷಮೆ ಕೇಳಲು ನಿರಾಕರಿಸಿದ ಪುನೀತ್ ನಾನು ಚಾಮರಾಜಪೇಟೆಯಲ್ಲೇ ಇದ್ದೇನೆ, ಬರೋದಾದ್ರೆ ಬನ್ನಿ ಎಂದು ಸವಾಲು ಹಾಕಿದ್ದಾರೆ ಎನ್ನಲಾಗಿದೆ. ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.