ಕೊಂಬೆಟ್ಟು ಸರಕಾರಿ ಪ.ಪೂ. ಕಾಲೇಜು, ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವ

ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗದ ವಾರ್ಷಿಕೋತ್ಸವ ದಿ. 24ರಂದು ನಡೆಯಿತು.

ಅಧ್ಯಕ್ಷತೆ ವಹಿಸಿದ್ಧ ಶಾಸಕ ಸಂಜೀವ ಮಠದೂರು ಮಾತನಾಡಿ,  364 ದಿನಗಳಲ್ಲಿ ಎಲ್ಲಾ ಸಿಗುವ ಒಂದು ದಿನವಂದರೆ ವಾರ್ಷಿಕೋತ್ಸವ. ಎಲ್ಲಾ ಮಕಳ ಪ್ರತಿಭೆ ಹಾಗೂ ಎಲ್ಲಾ ವಿದ್ಯಾರ್ಥಿಗಳು ವರ್ಷದಲ್ಲಿ ಮಾಡಿರುವ ಸಾಧನೆಯನ್ನು, ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ವಾರ್ಷಿಕೋತ್ಸವದಲ್ಲಿ ಆಗುತ್ತದೆ.  ಒಂದು ಪಾರಂಪರಿಕ ಕಾಲೇಜು, 100 ವರ್ಷ ಇತಿಹಾಸ ಇರುವ ಕಾಲೇಜು, ಶಿವರಾಮ ಕಾರಂತರು ಓಡಾಡಿದ ನೆಲ, ಮೊಳಹಳ್ಳಿ ಶಿವರಾಯರ ಹೆಸರಲ್ಲಿ ಸಮುದಾಯ ಭವನ ಹೊಂದಿರುವ ಶಾಲೆ – ಕಾಲೇಜು ಇದಾಗಿದ್ದು, ಮತೊಮ್ಮೆ ಅವರಂತಹ ವಿದ್ಯಾರ್ಥಿಗಳು ಇಲ್ಲಿ ಹುಟ್ಟಿ ಬರಬೇಕು ಎಂದು ಆಶಿಸಿದರು.

ಶಾಸಕರಿಂದ ಕೊಂಬೆಟ್ಟಿಗೆ ಅಚ್ಛೇ ದಿನ್































 
 

ನಗರಸಭಾ ಸದಸ್ಯ ಪಿ.ಜಿ. ಜಗನ್ನೀವಾಸ್ ರಾವ್ ಮಾತನಾಡಿ. 106 ವರ್ಷ ಇತಿಹಾಸವಿರುವ ಕಾಲೇಜಿನ ಪಾರಂಪರಿಕ ಕಟ್ಟಡದ ಅಭಿವೃದ್ಧಿಗೆ ಸುಮಾರು 2 ಕೋಟಿ ರೂ. ಅನುದಾನವನ್ನು ಶಾಸಕರು ಕೊಟ್ಟಿದ್ದಾರೆ. ನಮ್ಮ ಹೆಮ್ಮೆಯ ಪಾರಂಪರಿಕ ಕಟ್ಟಡಕ್ಕೆ ಶಾಸಕರು 5 ವರ್ಷ ಅವಧಿಯಲ್ಲಿ ಅನೇಕ ಯೋಜನೆಗಳನ್ನು ತರಿಸಿಕೊಟ್ಟಿದ್ದು, ಕೊಂಬೆಟ್ಟಿಗೆ ಆಚ್ಛೇ ದಿನ್ ಬಂದಿದೆ. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಆದ ಕಾಮಗಾರಿಗಳನ್ನು ಕಳೆದ ಬಾರಿ ಶಿಕ್ಷಣ  ಸಚಿವರು ಉದ್ಘಾಟಿಸಿದ್ದರು. ಶಾಸಕರ ಅನುದಾನದಲ್ಲಿ 16 ಲಕ್ಷ ರೂ. ಪಾರಂಪರಿಕ ಕಟ್ಟಡ ಎಂಬ ನೆಲೆಯಲ್ಲಿ ಅನುದಾನ ಒದಗಿಸಿ ಇಂದು ಉದ್ಘಾಟಿಸಿದ್ದಾರೆ ಎಂದರು.

ಪ್ರಾಂಶುಪಾಲ ದರ್ಣಪ್ಪ ಗೌಡ, ಇನ್ನೊರ್ವ ಪ್ರಾಂಶುಪಾಲ ವಸಂತ ಮೂಲ್ಯ, ಶಿಕ್ಷಕರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top