ಕಂದಕಕ್ಕೆ ಉರುಳಿದ ವ್ಯಾನ್‌ : 8 ಅಯ್ಯಪ್ಪ ಭಕ್ತರ ಸಾವು


ಪತ್ತನಂತಿಟ್ಟ : ಶಬರಿಮಲೆ ಯಾತ್ರಿಕರಿದ್ದ ವ್ಯಾನ್‌ ಆಳವಾದ ಕಂದಕಕ್ಕೆ ಉರುಳಿ ಬಿದ್ದು ಎಂಟು ಮಂದಿ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.

ತೇಕ್ಕಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಮಿಲಿ-ಕುಂಭಂ ಮಾರ್ಗದಲ್ಲಿ ತಮಿಳುನಾಡಿಗೆ ನೀರು ಸಾಗಿಸುವ ಪೈಪ್‌ಲೈನ್‌ ಬಳಿರಾತ್ರಿ 11 ಗಂಟೆಗೆ ಈ ಆಪಘಾತ ಸಂಭವಿಸಿದೆ. ವಿಪರೀತ ವೇಗ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಶಬರಿಮಲೆ ದರ್ಶನ ಮುಗಿಸಿ ವಾಪಸಾಗುತ್ತಿದ್ದ ತೇಣಿ-ಅಂಡಿಪಟ್ಟಿಯ ಭಕ್ತರು ಈ ವ್ಯಾನಿನಲ್ಲಿದ್ದರು. ಗಾಯಾಳುಗಳಲ್ಲಿ ಒಂದು ಮಗುವೂ ಸೇರಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top