ಉತ್ತಮ ಸಮಾಜ ನಿರ್ಮಾಣಕ್ಕೆ ಯುವಜನತೆ ತಯಾರಾಗಬೇಕು

ಪುತ್ತೂರು:  ಆಧುನಿಕ ಯುಗದಲ್ಲಿ ಯುವಜನತೆಯು  ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದು, ಕೆಲವೊಮ್ಮೆ  ಎದುರಿಸುವ ಸಲುವಾಗಿ  ವಿಫಲವಾಗುತ್ತಾರೆ. ಕಷ್ಟಗಳು ಎದುರಾದಾಗ ಅದನ್ನು ಹಿಮ್ಮೆಟ್ಟಿ ಮುಂದುವೆರೆಯಬೇಕು. ಇತ್ತೀಚಿನ ದಿನಗಳಲ್ಲಿ ಯುವಜನತೆ ಬಹಿರಂಗವಾಗಿ ಗೆದ್ದರೂ ಕೂಡ ಅಂತರಂಗದಲ್ಲಿ  ಸೋಲುತ್ತಾರೆ. ಯಾವುದೇ  ಸಂದರ್ಭದಲ್ಲೂ  ಹಿಂಜರಿಯದೆ ಸದೃಡತೆಯಿಂದ, ಆತ್ಮಸ್ಥೈರ್ಯದಿಂದ  ಮುನ್ನುಗ್ಗಬೇಕು. ಯುವಜನತೆ ಯಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಆಗಲು ಸಾಧ್ಯ. ಆದರಿಂದ ರಾಷ್ಟ್ರ ನಮ್ಮನ್ನು ಕಟ್ಟುವುದಲ್ಲ ನಾವು  ರಾಷ್ಟ್ರವನ್ನು ಕಟ್ಟಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಆರತಿ ಹೇಳಿದರು.

ಇವರು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಸಮಾಜ ಶಾಸ್ತ್ರ ವಿಭಾಗ  ಹಾಗೂ ಕಾಲೇಜಿನ ಮಹಿಳಾ ಕೋಶ, ಐಕ್ಯೂಎಸಿ ಜಂಟಿ‌ ಆಶ್ರಯದಲ್ಲಿ ನಡೆದ ಆಧುನಿಕ ಸಮಾಜದಲ್ಲಿ ಯುವಜನತೆಗಿರುವ ಸವಾಲುಗಳು ಎನ್ನುವ ವಿಚಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಯಾವುದೇ ಒಂದು ಬದಲಾವಣೆ ಮೊದಲು ನಮ್ಮಿಂದ ಆಗಬೇಕು ಹಾಗಾದರೆ ಮಾತ್ರ ಸಮಾಜ, ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ. ಭಾರತದಲ್ಲಿ ಇರುವಷ್ಟು ಯುವಜನರು ಬೇರೆ ಎಲ್ಲಿಯೂ ಇಲ್ಲ ಎಂದರು.































 
 

ಸಣ್ಣ ಸಣ್ಣ ವಿಷಯಗಳನ್ನು ಎದುರಿಸಲು ಆಗದೆ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಬದಲು ಬಂದ ಸಮಸ್ಯೆಯನ್ನು ಎದುರಿಸುವ ಶಕ್ತಿ ಸಾಮರ್ಥ್ಯ ಇರಬೇಕು. ಯಾವುದೇ ಒಂದು ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಹಿರಿಯರು ಅಥವಾ ಹೆತ್ತವರು ನೀಡುವ ಸಲಹೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ  ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಯುವಜನರು ಯಾವತ್ತೂ ಸಂಕುಚಿತರಾಗಬಾರದು. ಬದಲಾಗಿ ತನ್ನನ್ನು ತಾನೇ ಗಟ್ಟಿಯಾಗಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಈಗಿನ ಜನತೆಗೆ ಸಣ್ಣ ಘಟನೆಯಾದರೂ ಎದುರಿಸುವ ಧೈರ್ಯವಿರುವುದಿಲ್ಲ. ಹಾಗಾಗಿ ಗಟ್ಟಿ ಮನಸ್ಸಿನಿಂದ ಒಂದು ಒಳ್ಳೆಯ ಸಮಾಜವನ್ನು ಕಟ್ಟುವಲ್ಲಿ  ಯುವಜನರು ಮುಂದಾಗಬೇಕು

ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ದೇವಯಾನಿ ಸ್ವಾಗತಿಸಿ, ಉಜ್ವಲ್ ವಂದಿಸಿ ದಿವ್ಯ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top